ಸಂತ,ಶರಣರ ಜೀವನ ತತ್ವ ಅನುಸರಣೆ ಅಗತ್ಯ

| Published : May 07 2024, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಯರಗಟ್ಟಿ: ಸಂತರು ಮತ್ತು ಶರಣರನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಅವರ ಜೀವನ ತತ್ವಗಳನ್ನು ಅನುಸರಿಸುವ ಕೆಲಸವಾಗಬೇಕಿದೆ ಎಂದು ಕಟಕೋಳದ ಸಚ್ಚಿದಾನಂದ ಮಹಾಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ:ಸಂತರು ಮತ್ತು ಶರಣರನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಅವರ ಜೀವನ ತತ್ವಗಳನ್ನು ಅನುಸರಿಸುವ ಕೆಲಸವಾಗಬೇಕಿದೆ ಎಂದು ಕಟಕೋಳದ ಸಚ್ಚಿದಾನಂದ ಮಹಾಸ್ವಾಮಿಗಳು ತಿಳಿಸಿದರು.

ಸ್ಥಳೀಯ ಮಹಾಂತ ದುರದುಂಡೇಶ್ವರ ಶ್ರೀಮಠದ ಆವರಣದಲ್ಲಿ ಬಸವ ಜಯಂತಿ ಹಾಗೂ ಮರಡಿ ಬಸವೇಶ್ವರ ಜಾತ್ರಾ ನಿಮಿತ್ಯ ಶರಣರ ಚರಿತಾಮೃತ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ಕೇವಲ ಹಾಡು ಕುಣಿತಗಳ ಹಿಂದೆ ಬೀಳದೆ, ಈ ನೆಲಕ್ಕೆ ಬೆಳಕು ತೋರಿದ ಸಂತರು, ಶರಣರು, ಮಹಾಪುರುಷರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.ಪ್ರವಚನಕಾರ ಅಡವೀಶ್ವರ ದೇವರು ಮಾತನಾಡಿ, ಶರಣರು ತಮ್ಮ ಜೀವನ, ನಡತೆ, ಮಾತುಗಳಿಂದ ಇತರರಿಗೆ ಮಾದರಿಯಾದವರು. ಇದರಿಂದಲೇ ಅವರು ಶರಣತ್ವವನ್ನು ಪಡೆದರು. ಇಂತಹ ಸಾತ್ವಿಕ ಬದುಕಿನಿಂದ ಮೋಕ್ಷ ಸಾಧ್ಯ ಎಂಬ ಕಲ್ಪನೆಯಿದೆ. ಇಂತಹ ಶರಣರು, ಮಹಾಪುರುಷರ ಜೀವನ ಮಾದರಿಯಾಗಬೇಕಿದೆ ಎಂದರು.ಹಿರಿಯ ಎ.ಎಂ.ಹಾದಿಮನಿ ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮೇಶ್ವರ ಅವರು ಸಾವಿರಕ್ಕಿಂತಲೂ ಅಧಿಕ ವಚನಗಳನ್ನು ಬರೆದಿದ್ದಾರೆ. ಆದರೆ ಕೆಲವು ಸಾವಿರ ವಚನಗಳು ಮಾತ್ರ ನಮಗೆ ಲಭಿಸಿದ್ದು, ಶರಣ ಸಂತರ ಪರಂಪರೆ ಬೆಳೆಯುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಈ ವೇಳೆ ಮೋಹನ ಶೆಟ್ಟರ, ಬಾಬಣ್ಣ ಹಸಬಿ, ಮನೋಹರ ಕೌಜಗೇರಿ, ರಾಜೇಂದ್ರ ವಾಲಿ, ವಿರೂಪಾಕ್ಷ ಜಕಾತಿ, ಶಶಿಕಾಂತ ಹಾದಿಮನಿ, ಅಶೋಕ ಗಾಣಗಿ, ಎಂ.ಬಿ.ನಂದಿಮಠ, ಮಹಾಂತೇಶ ಜಕಾತಿ, ಶಿವಾನಂದ ಯರಗಣವಿ, ತಮ್ಮಣ್ಣ ಕಾಮಣ್ಣವರ, ಶಿವಾನಂದ ಪಟ್ಟಣಶೆಟ್ಟಿ, ಗಜಾನನ ಚಿನಗುಡಿ, ಈರಪ್ಪ ಹಾದಿಮನಿ, ಭಕ್ತಿದಾಸೋಹಿ ಕುಮಾರ ರಾಮದುರ್ಗ ಸೇರಿದಂತೆ ಅನೇಕ ಇದ್ದರು.