ವಿದೇಶದಲ್ಲಿ ಮಿಂಚುತ್ತಿರುವ ಕರುನಾಡ ಬಾಲಪ್ರತಿಭೆ

| Published : May 07 2024, 01:02 AM IST

ವಿದೇಶದಲ್ಲಿ ಮಿಂಚುತ್ತಿರುವ ಕರುನಾಡ ಬಾಲಪ್ರತಿಭೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವನಾಥ ಮುನವಳ್ಳಿ ಮುಧೋಳಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಕ್ಷೀಣಿಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಮಂಡಿಸುವ ಅನೇಕ ಸಂಶೋಧನಾ ಪ್ರಬಂಧಗಳು ಕಾಟಾಚಾರದ ಸಂಶೋಧನೆಗಳಾಗಿವೆ. ಇಂಥದ್ದರಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡ ನಾಡಿದ 12 ವರ್ಷದ ಕುವರಿ ಸಾಗರದಾಳದ ಸಂಪತ್ತು ಮತ್ತು ರಹಸ್ಯಗಳನ್ನು ಬಿಚ್ಚಿಡುವ ಇಂಗ್ಲಿಷ್‌ ನಲ್ಲಿ ಸಂಶೋಧನಾ ಗ್ರಂಥ ಬರೆಯುವ ಮೂಲಕ ದೇಶ, ವಿದೇಶಗಳಲ್ಲಿ ಛಾಪು ಮೂಡಿಸಿದ್ದಾಳೆ.

ವಿಶ್ವನಾಥ ಮುನವಳ್ಳಿ ಮುಧೋಳಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಕ್ಷೀಣಿಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಮಂಡಿಸುವ ಅನೇಕ ಸಂಶೋಧನಾ ಪ್ರಬಂಧಗಳು ಕಾಟಾಚಾರದ ಸಂಶೋಧನೆಗಳಾಗಿವೆ. ಇಂಥದ್ದರಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡ ನಾಡಿದ 12 ವರ್ಷದ ಕುವರಿ ಸಾಗರದಾಳದ ಸಂಪತ್ತು ಮತ್ತು ರಹಸ್ಯಗಳನ್ನು ಬಿಚ್ಚಿಡುವ ಇಂಗ್ಲಿಷ್‌ ನಲ್ಲಿ ಸಂಶೋಧನಾ ಗ್ರಂಥ ಬರೆಯುವ ಮೂಲಕ ದೇಶ, ವಿದೇಶಗಳಲ್ಲಿ ಛಾಪು ಮೂಡಿಸಿದ್ದಾಳೆ.

ಹೌದು, ಕವಿಚಕ್ರವರ್ತಿ ರನ್ನನ ನಾಡಿನ ಮುಧೋಳದ ಅಜ್ಜ-ಅಜ್ಜಿಯವರ ಮನೆಯಲ್ಲಿ ಜನ್ಮತಾಳಿರುವ ಸಾಚಿ ಪಾಟೀಲ ಚಿಕ್ಕ ವಯಸ್ಸಿನಲ್ಲಿಯೇ ಸಂಶೋಧನಾ ಪುಸ್ತಕ ರಚಿಸಿರುವುದು ಅಸಮಾನ್ಯ ಕಾರ್ಯವಾಗಿದ್ದು, ಈ ಮೂಲಕ ಕವಿಚಕ್ರವರ್ತಿಯ ನಂತರ ಮುಧೋಳದ ಹೆಸರನ್ನು ದೇಶ, ವಿದೇಶಗಳಲ್ಲಿ ಪಸರಿಸುತ್ತಿದ್ದಾರೆ. 12 ವರ್ಷದ ಸಾಚಿ ಪಾಟೀಲ ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಬೆಳಕು ಚೆಲ್ಲುತ್ತಿದ್ದು, ಆಕೆ ಇಂಗ್ಲಿಷ್‌ ನಲ್ಲಿ ಬರೆದ ಸಮುದ್ರದಾಳದ ರಹಸ್ಯ ಬೇಧಿಸುವ ಕುರಿತು ಪುಸ್ತಕ ಪ್ರಕಟಗೊಂಡು ಯುಕೆ, ಯುಎಸ್‌ಎ, ಯುರೋಪ, ಏಷ್ಯಾ ದೇಶಗಳಲ್ಲಿ ಸಂಚಲನ ಮೂಡಿಸಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಲಂಡನ್ನಿನ ಲೇಸ್ಟರ್ ನಗರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಆನಂದ ಪಾಟೀಲ ಮತ್ತು ಡಾ.ರಾಜೇಶ್ವರಿ ಪಾಟೀಲ ಅವರ ಪುತ್ರಿ ಹಾಗೂ ಮುಧೋಳದ ನಿವೃತ್ತ ಪ್ರಾಧ್ಯಾಪಕಿ ಸುಲೋಚನಾ ಜವಳಗಿ (ಚಂದಾ) ಹಾಗೂ ನಿವೃತ್ತ ಪ್ರಾಚಾರ್ಯ ಪ್ರಭು ಚಂದಾ ಅವರ ಮೊಮ್ಮಗಳಾದ ಸಾಚಿ ಪಾಟೀಲ ಡಿಗ್ ಇನ್‌ ಟು ದಿ ಸಿಕ್ರೇಟ್ಸ್ ಆಫ್ ದಿ ಓಸಿಯನ್ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾಳೆ.

ನೀರಿನ ಮಹತ್ವ ಸಾರುವ ಕೃತಿ:

45 ಪುಟಗಳ ಈ ಪುಸ್ತಕವು 7 ಅಧ್ಯಾಯಗಳನ್ನೊಳಗೊಂಡಿದ್ದು, ಸಾಗರದಾಳದ ಸಂಪತ್ತು ಮತ್ತು ರಹಸ್ಯಗಳನ್ನು ಈ ಕೃತಿಯಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಪ್ರತಿಯೊಂದು ಅಧ್ಯಾಯ ಓದುಗರಿಗೆ ವಿಶಿಷ್ಟವಾದ ಅನುಭವ ನೀಡುತ್ತದೆ. ಜೀವಜಲ ಸಂಪತ್ತು ಅಮೂಲ್ಯವಾಗಿದ್ದು, ಅದು ಮಾನವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಬಳಕೆಯಾಬೇಕೆಂಬ ಚಿಂತನೆ ಹಾಗೂ ಹಂಬಲ ಈ ಪುಸ್ತಕದಲ್ಲಿ ವ್ಯಕ್ತವಾಗಿದೆ. ಜಗತ್ತಿನ ಶೇ.67ರಷ್ಟು ಸಾಗರಗಳು ತ್ಯಾಜ್ಯವಸ್ತುಗಳಿಂದ ಕಲುಷಿತಗೊಂಡಿವೆ ಎಂಬ ಕಳವಳ ವ್ಯಕ್ತಪಡಿಸಿದ್ದು, ಶೇ.5ರಷ್ಟು ಶುದ್ಧ ನೀರು ಮಾತ್ರ ಲಭ್ಯವಿದ್ದು, ಇನ್ನೂ ಹೆಚ್ಚಿಗೆ ಲಭ್ಯವಾಗಬೇಕು, ವೃದ್ಧಿಯಾಗಬೇಕೆಂಬ ಆಕೆಯ ಕಳಕಳಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಯುರೋಪಿನ ಫ್ರಾನ್ಸ್, ಇಟಲಿ, ಜರ್ಮನಿ, ಬೆಲ್ಜಿಯಂ ಮುಂತಾದ ದೇಶಗಳ ಪ್ರವಾಸವು ಈಕೆಗೆ ಹೆಚ್ಚಿನ ಅನುಭವ ನೀಡಿದೆ. ಖ್ಯಾತ ಇಂಗ್ಲಿಷ್‌ ಲೇಖಕ ಜೆ.ಕೆ. ರೋಲಿಂಗ್, ಯಾನಾ ಜೇಮ್ಸ್, ಡೆವಿಡ್ ವಿಲಿಯಮ್ಸ್ ಮುಂತಾದವರ ಕೃತಿಗಳು ಮತ್ತು ಹಲವು, ಮಕ್ಕಳ ಪುಸ್ತಕಗಳು, ತಾಯಿ-ತಂದೆಯವರ ಪ್ರೋತ್ಸಾಹ ಈ ಕೃತಿ ರಚನೆಗೆ ಆಕೆಗೆ ಪ್ರೇರಣೆ ನೀಡಿವೆ ಎನ್ನುತ್ತಾಳೆ ಸಾಚಿ.

ಅಚ್ಚ ಕನ್ನಡ ಮಾತು, ಬಹುಮುಖ ಪ್ರತಿಭೆ:

ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಈ ಕುಟುಂಬ ಮನೆಯಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುತ್ತಾರೆ. ಅರಳು ಹುರಿದಂತೆ ಕನ್ನಡದಲ್ಲಿಯೇ ಮಾತನಾಡುವ ಸಾಚಿ, ಕನ್ನಡ ಸಿನೆಮಾ ಗೀತೆಗಳನ್ನು ಸುಸ್ರಾವ್ಯವಾಗಿ ಹಾಡುತ್ತಾಳೆ. ಬಹುಮುಖ ಪ್ರತಿಭೆ ಹೊಂದಿರುವ ಸಾಚಿ ನಾಟ್ಯ, ಚಿತ್ರಕಲೆ, ಅಡುಗೆ, ಸಂಗೀತ, ಭರತನಾಟ್ಯ ಮತ್ತು ಹಾಡುಗಾರಿಕೆಯಲ್ಲೂ ಛಾಪು ಮೂಡಿಸಿದ್ದಾಳೆ. ಸದಾ ಒಂದಿಲ್ಲೊಂದು ಚಟುವಟಿಕೆ ನಿರತವಾಗಿರುವ ಸಾಚಿ ಪಾಟೀಲ ಸ್ಪೇಸ್ ಮತ್ತು ಪ್ಲಾನೆಟ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹಾಗೂ ಆಸಕ್ತಿ ಹೊಂದಿದ್ದಾಳೆ. ಈಕೆ ರಚಿಸಿದ ಪುಸ್ತಕ ಅಮೇಜಾನ್, ಫ್ಲಿಪ್‌ಕಾರ್ಟ್, ಗೂಗಲ್, ಕೋಬೋ, ಸಪ್ನಾ, ಜೀಫ್ಫಿಬೀಜ್, ಇನ್‌ಗ್ರಾಮ್ ಸ್ಪಾರ್ಕ್ ಮುಂತಾದ ವೆಬ್‌ಸೈಟ್‌ಗಳಲ್ಲಿ ಲಭ್ಯವಿದ್ದು, ಆಸಕ್ತರು ಇದನ್ನು ಓದಬಹುದಾಗಿದೆ.

ವಿಶ್ವನಾಥ ಮುನವಳ್ಳಿ

ಮುಧೋಳಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಕ್ಷೀಣಿಸುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಮಂಡಿಸುವ ಅನೇಕ ಸಂಶೋಧನಾ ಪ್ರಬಂಧಗಳು ಕಾಟಾಚಾರದ ಸಂಶೋಧನೆಗಳಾಗಿವೆ. ಇಂಥದ್ದರಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡ ನಾಡಿದ 12 ವರ್ಷದ ಕುವರಿ ಸಾಗರದಾಳದ ಸಂಪತ್ತು ಮತ್ತು ರಹಸ್ಯಗಳನ್ನು ಬಿಚ್ಚಿಡುವ ಇಂಗ್ಲಿಷ್‌ ನಲ್ಲಿ ಸಂಶೋಧನಾ ಗ್ರಂಥ ಬರೆಯುವ ಮೂಲಕ ದೇಶ, ವಿದೇಶಗಳಲ್ಲಿ ಛಾಪು ಮೂಡಿಸಿದ್ದಾಳೆ.