ವಿಶ್ವದಲ್ಲಿ ಕಸಾಪ ಪರಂಪರೆ ಸಂಸ್ಕೃತಿ ಶ್ರೀಮಂತ: ಡಾ.ಬಸವರಾಜ ಖೋತ

| Published : May 07 2024, 01:03 AM IST

ವಿಶ್ವದಲ್ಲಿ ಕಸಾಪ ಪರಂಪರೆ ಸಂಸ್ಕೃತಿ ಶ್ರೀಮಂತ: ಡಾ.ಬಸವರಾಜ ಖೋತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ, ಕಲೆ, ಸಾಹಿತ್ಯ, ಸಂಗೀತ, ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸತತವಾಗಿ 110 ವರ್ಷಗಳಿಂದಲೂ ನಿರಂತರ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ವಿಶ್ವದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ಪರಂಪರೆ ಶ್ರೀಮಂತವಾಗಿದೆ ಎಂದು ಸಾಹಿತಿ ಡಾ.ಬಸವರಾಜ ಖೋತ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ, ಕಲೆ, ಸಾಹಿತ್ಯ, ಸಂಗೀತ, ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸತತವಾಗಿ 110 ವರ್ಷಗಳಿಂದಲೂ ನಿರಂತರ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ವಿಶ್ವದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ಪರಂಪರೆ ಶ್ರೀಮಂತವಾಗಿದೆ ಎಂದು ಸಾಹಿತಿ ಡಾ.ಬಸವರಾಜ ಖೋತ ಹೇಳಿದರು.

ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೆಡೆದು ಬಂದ ದಾರಿ ವಿಷಯದ ವಿಶೇಷ ಉಪನ್ಯಾಸ ನೀಡಿ, 1915ರಿಂದ ಈವರಗೆ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿರುವ ಕನ್ನಡದ ಮನಸ್ಸುಗಳನ್ನು ಸ್ಮರಣೆ ಮಾಡಿದರು. ಶತಮಾನ ಕಂಡ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿರಂತರವಾಗಿ ನಡೆಯುವ ಕನ್ನಡದ ಸಾಹಿತ್ಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು.

ಸಾಹಿತಿ ಡಾ.ಪ್ರಕಾಶ ಖಾಡೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥಾಪಕರಾದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು, ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ, ಸರ್.ಮಿರ್ಜಾ ಇಸ್ಮಾಯಿಲ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಸವಿನೆನಪಿಗಾಗಿ ಕನ್ನಡ ನಾಡು ನುಡಿ ಸೇವೆ ಮಾಡಿರುವ ಹಿರಿಯರಾದ ಸಾಹಿತಿ ಅಂಬಾದಾಸ ವಡೆ, ಸಾವಯವ ಕೃಷಿ ತಜ್ಞೆ ಮಂಜುಳಾ ಪಾಟೀಲ, ಕನ್ನಡ ಪಂಡಿತ ಸಿ.ಎಸ್. ನಾಗನೂರು ಅವರಿಗೆ ಪರಿಷತ್ತಿನ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ವಚನ ವೈಭವ ಮಹಿಳಾ ಜಾನಪದ ಕಲಾಸಂಘದ ಅಧ್ಯಕ್ಷೆ ಲಕ್ಷ್ಮೀ ಗೌಡರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಬಾಗಲಕೋಟೆ ತಾಲೂಕು ಘಟಕದ ಅಧ್ಯಕ್ಷ ಪಾಂಡರಂಗ ಸಣ್ಣಪ್ಪನವರ, ಶಂಕರ ಹೂಲಿ, ಜಿಲ್ಲಾ ಕಸಾಪ ಮಾಧ್ಯಮ ಕಾರ್ಯದರ್ಶಿ ಪ್ರಕಾಶ ಗುಳೇದಗುಡ್ಡ, ಮುತ್ತು ಬಳ್ಳಾ, ಸಾಹಿತಿ ಡಾ.ಪಿ.ಎಂ.ಹುಗ್ಗಿ, ಸಿ.ಎನ್. ಬಾಳಕ್ಕನವರ, ಆರ್.ಸಿ. ಚಿತ್ತವಾಡಗಿ, ಡಾ.ಮೌನೇಶ ಕಮ್ಮಾರ, ಅಮರೇಶ ಕೊಳ್ಳಿ, ಶಿರೂರು ವಲಯ ಘಟಕದ ಅಧ್ಯಕ್ಷ ಸಂಜಯ ನಡುವಿನಮನಿ ಉಪಸ್ಥಿತರಿದ್ದರು.

ಜಯಾ ಭದ್ರಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕಸಾಪ ಬಾಗಲಕೋಟೆ ತಾಲೂಕ ಘಟಕದ ಅಧ್ಯಕ್ಷ ಪಾಂಡರಂಗ ಸಣ್ಣಪ್ಪನವರ ಸ್ವಾಗತಿಸಿದರು. ಡಾ.ಚಂದ್ರಶೇಖರ ಕಾಳನ್ನವರ, ಕಾರ್ಯಕ್ರಮ ನಿರೂಪಿಸಿದರು. ಶಿರೂರು ವಲಯ ಘಟಕದ ಅಧ್ಯಕ್ಷ ಸಂಜಯ ನಡುವಿನಮನಿ ವಂದಿಸಿದರು.-ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶ ಮತ್ತು ಆಶಯಗಳನ್ನು ನಾವೆಲ್ಲರೂ ಪಾಲಿಸಬೇಕು. ಕನ್ನಡ ಸಂಸ್ಕೃತಿ ಪರಂಪರೆಯ ನಾಡು ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

-ಶಿವಾನಂದ ಶೆಲ್ಲಿಕೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ