ಮಾನ್ವಿ ಮತಗಟ್ಟೆಗಳಲ್ಲಿ ಮಸ್ಟರಿಂಗ್‌ ಕಾರ್ಯ ಸುಸೂತ್ರ

| Published : May 07 2024, 01:01 AM IST

ಮಾನ್ವಿ ಮತಗಟ್ಟೆಗಳಲ್ಲಿ ಮಸ್ಟರಿಂಗ್‌ ಕಾರ್ಯ ಸುಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಾನ್ವಿ ಪಟ್ಟಣದ ಬಾಷುಮಿಯಾ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ರಾಯಚೂರು ಲೋಕಸಭಾ ಚುನಾವಣೆ ಅಂಗವಾಗಿ ಮತಗಟ್ಟೆ ಸಿಬ್ಬಂದಿ ತಮಗೆ ಕರ್ತವ್ಯಕ್ಕೆ ವಹಿಸಿದ ಮತಗಟ್ಟೆಗಳಿಗೆ ತೆರಳುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಮಾನ್ವಿ

ಲೋಕಸಭಾ ಚುನಾವಣೆ ಅಂಗವಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಮಸ್ಟರಿಂಗ್ ಕಾರ್ಯ ಸೋಮವಾರ ನಡೆಯಿತು.

ಪಟ್ಟಣದ ಬಾಷುಮಿಯಾ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಆವರಣದಲ್ಲಿ ಮಾನ್ವಿ ಸಹಾಯಕ ಚುನಾವಣಾಧಿಕಾರಿ ಪ್ರಕಾಶ್.ವಿ ನೇತೃತ್ವದಲ್ಲಿ ಜರುಗಿತು.

ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾನ್ವಿ ಮತ್ತು ಸಿರವಾರ ತಾಲೂಕುಗಳ ವ್ಯಾಪ್ತಿಯಲ್ಲಿನ 276 ಮತಗಟ್ಟೆಗಳಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ಮೂಲ ಭೂತಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಾರಿ ರಾಯಚೂರು ಪ.ಪಂಗಡ ಕ್ಷೇತ್ರದಿಂದ ಲೋಕಸಭಾಗೆ ನಡೆಯುತ್ತಿರುವ ಚುನಾವಣೆ ಸ್ಪರ್ಧಿಸುವುದಕ್ಕೆ ಅಂತಿಮವಾಗಿ 8 ಅಭ್ಯರ್ಥಿಗಳು ಸ್ಫರ್ಧೆ ಕಣದಲ್ಲಿದ್ದು, ಮಾನ್ವಿ ವಿಧಾನಸಭಾ ವ್ಯಾಪ್ತಿಯಲ್ಲಿ ಪುರುಷ ಮತದಾರರು 1,16,953 ಮಹಿಳಾ ಮತದಾರರು 1,22,530, ತೃತೀಯ ಲಿಂಗಿ ಮತದಾರರು 64, ಒಟ್ಟು 2,39,547 ಮತದಾರರು ಈ ಬಾರಿ ಮತ ಚಾಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಈ ವೇಳೆ ತಹಸೀಲ್ದಾರ್ ಜಗದೀಶ್ ಚೌರ್, ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಆರೋಗ್ಯಧಿಕಾರಿ ಶರಣಬಸವ ಪಾಟೀಲ್, ಬಿಸಿಯೂಟ ಯೋಜನೆಯ ಅಕ್ಷರ ದಾಸೋಹ ಅಧಿಕಾರಿ ಸುರೇಶನಾಯಕ್‌ ಸೇರಿದಂತೆ ಕಂದಯ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಅರೆಸೇನಾ ಪಡೆಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಸೂಕ್ತವಾದ ಭದ್ರತೆಯನ್ನು ಕೈಗೊಳ್ಳಲಾಯಿತು.