ನೇರನುಡಿ ನಿಷ್ಟುರವಾದಿಯಾಗಿದ್ದ ಶ್ರೀನಿವಾಸಪ್ರಸಾದ್: ನಾರಾಯಣಗೌಡ

| Published : May 07 2024, 01:07 AM IST

ಸಾರಾಂಶ

ಅಪರೂಪದ ರಾಜಕಾರಣಿಯಲ್ಲಿ ಇವರು ಒಬ್ಬರು, ಇಂತಹ ವ್ಯಕ್ತಿತ್ವ ಸಿಗುವುದು ಬಹಳ ಅಪರೂಪದಲ್ಲಿ ಅಪರೂಪ, ಇವರು ಜಾತಿಗೆ ಸೀಮಿತರಲ್ಲ ಎಲ್ಲ ಜಾತಿಯ ಅವರನ್ನು ಪ್ರೀತಿಸುತ್ತಾ ಎಲ್ಲ ಜಾತಿಯವರನ್ನು ಸಹ ಬೆಳೆಸಿದ್ದಾರೆ, ಇತರ ರಾಜಕಾರಣಿಗಳಿಗೆ ಪ್ರಸಾದ್ ಅವರೇ ಮಾದರಿ

ಕನ್ನಡಪ್ರಭ ವಾರ್ತೆ ಮೈಸೂರು

ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಯಾವುದೇ ಪಕ್ಷದಲ್ಲಿ ಇದ್ದರೂ ತಾನು ನಂಬಿದ ತತ್ವ ಸಿದ್ಧಾಂತಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅಪರೂಪದ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು, ಅವರ ನಿಧನದಿಂದ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಹೇಳಿದರು.

ನಗರದ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಸೋಮವಾರ ನಡೆದ ಶ್ರೀನಿವಾಸಪ್ರಸಾದ್ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಪರೂಪದ ರಾಜಕಾರಣಿಯಲ್ಲಿ ಇವರು ಒಬ್ಬರು, ಇಂತಹ ವ್ಯಕ್ತಿತ್ವ ಸಿಗುವುದು ಬಹಳ ಅಪರೂಪದಲ್ಲಿ ಅಪರೂಪ, ಇವರು ಜಾತಿಗೆ ಸೀಮಿತರಲ್ಲ ಎಲ್ಲ ಜಾತಿಯ ಅವರನ್ನು ಪ್ರೀತಿಸುತ್ತಾ ಎಲ್ಲ ಜಾತಿಯವರನ್ನು ಸಹ ಬೆಳೆಸಿದ್ದಾರೆ, ಇತರ ರಾಜಕಾರಣಿಗಳಿಗೆ ಪ್ರಸಾದ್ ಅವರೇ ಮಾದರಿ ಎಂದು ಹೇಳಿದರು.

ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ನಿಷ್ಕಳಂಕ ರಾಜಕಾರಣಿ, ಅಪ್ಪಟ ಹೋರಾಟಗಾರ, ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮೈಸೂರು ಭಾಗದಲ್ಲಿ ದೀನ ದಲಿತರ, ಬಡವರ ಆಶಾಕಿರಣವಾಗಿದ್ದ ಅವರು ತಮ್ಮ ರಾಜಕೀಯ ಜೀವ ನದುದ್ದಕ್ಕೂ ತುಳಿತಕ್ಕೊಳಗಾದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದರು ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಸುನಿಲ್, ಕೆಪಿಸಿಸಿ ಸದಸ್ಯರಾದ ನಟರಾಜ್, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಬ್ರಾಡ್ ವೇ ಕಿರಣ್, ವಿನಯ್ ಕಣಗಾಲ್, ಗೌರಿಶಂಕರ್, ಶಿವು, ಪುರುಷೋತ್ತಮ್, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಎಸ್.ಎನ್. ರಾಜೇಶ್, ಮಹದೇವ್, ಚಕ್ರಪಾಣಿ ಭಾಗವಹಿಸಿದ್ದರು.