ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪ್ರಜ್ವಲ್ ಯುವಕ ಮಂಡಲ ಮಾದರಿ: ಕಾಮತ್

| Published : May 07 2024, 01:04 AM IST

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪ್ರಜ್ವಲ್ ಯುವಕ ಮಂಡಲ ಮಾದರಿ: ಕಾಮತ್
Share this Article
  • FB
  • TW
  • Linkdin
  • Email

ಸಾರಾಂಶ

ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಬ್ಬುಸ್ವಾಮಿ ರಂಗಮಂದಿರದಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ 26ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಸೂಟರ್ ಪೇಟೆಯ ಪ್ರಜ್ವಲ್‌ ಯುವಕ ಮಂಡಲ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಜಿಲ್ಲೆಗೆ ಮಾದರಿಯಾಗಿದೆ. ಕೇವಲ ವಾರ್ಷಿಕೋತ್ಸವ, ಮನರಂಜನೆಗೆ ಮಾತ್ರ ಈ ಯುವಕ ಮಂಡಲ ಸೀಮಿತಗೊಳ್ಳದೆ ಪರಿಸರದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.ಅವರು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಬ್ಬುಸ್ವಾಮಿ ರಂಗಮಂದಿರದಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ 26ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರದಲ್ಲಿ ಸೌಹಾರ್ದಯುತವಾಗಿ ರಚನಾತ್ಮಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದರಿಂದ ಪ್ರಜ್ವಲ್ ಯುವಕ ಮಂಡಲ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ ಎಂದರು.

ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಮಾತನಾಡಿ, ಪ್ರಸ್ತುತ ವಿದ್ಯೆಯ ಅಗತ್ಯ ಇದೆ. ವಾಸ್ತವತೆ, ಮಾನವೀಯತೆ ಬೆಳೆಸುವ ವಿದ್ಯೆಯ ಜೊತೆಗೆ ಸಾಮಾಜಿಕ ಅಸಮಾನತೆ ಹೋಗಲಾಡಿಸಬಹುದು. ಈ ಮೂಲಕ ಅಧಿಕಾರ ಹಾಗೂ ಸಾಮಾಜಿಕ ಸ್ಥಾನಮಾನ ಗಳಿಸಬಹುದು. ಈ ನೆಲೆಯಲ್ಲಿ ಪ್ರಜ್ವಲ್ ಯುವಕ ಮಂಡಲ ತನ್ನ ವಾರ್ಷಿಕೋತ್ಸವ ಸಂದರ್ಭದಲ್ಲಿ ನಿರಂತರ 26 ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಜ್ವಲ್ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಪಿ. ವಹಿಸಿದ್ದರು.

ಇ-ಅಶ್ವ ಅಟೋಮೋಟೀವ್ ಪ್ರೈ. ಲಿ., ಉಡುಪಿ ಇದರ ನಿರ್ದೆಶಕ ಕಿರಣ್ ಶೆಟ್ಟಿ, ಪ್ರಜ್ವಲ್ ಯುವಕ ಮಂಡಲದ ಗೌರವ ಸಲಹೆಗಾರ ಕೆ.ಕೆ. ಪೇಜಾವರ, ಎಸ್. ಜಗದೀಶ್ಚಂದ್ರ ಅಂಚನ್, ಯು. ಬಿ. ಪೃಥ್ವಿರಾಜ್ ಬಂಗೇರ, ಮಜಿಲ ಶ್ರೀ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ರಮೇಶ್ ಕೋಟ್ಯಾನ್ ಹಾಗೂ ಪ್ರಜ್ವಲ್ ಯುವಕ ಮಂಡಲ ಅಧ್ಯಕ್ಷ ಲೋಕೇಶ್ ನಂಬಿಯಾರ್ ಭಾಗವಹಿಸಿದ್ದರು.

ಸೃಜನ್ ಮಾನವ್ ಪೇಜಾವರ ಸ್ವಾಗತಿಸಿ, ವಂದಿಸಿದರು.

ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರು ಅಭಿನಯಿಸಿದ ’ಕಥೆ ಎಡ್ಡೆಂಡು’ ತುಳು ನಾಟಕ ಪ್ರದರ್ಶನಗೊಂಡಿತು.