2ನೇ ಹಂತದ ಮತದಾನಕ್ಕೆ ಸಿಬ್ಬಂದಿ ಸರ್ವ ಸನ್ನದ್ಧ

| Published : May 07 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಕೇಂದ್ರಗಳನ್ನು ತೆರೆಯಲಾಗಿದೆ. ಹುಕ್ಕೇರಿಯ ಎಸ್‌ಕೆ ಪಿಯು ಕಾಲೇಜು, ಅಥಣಿಯ ಎಸ್ಎಸ್ಎಂಎಸ್, ಕಾಗವಾಡದ ಶಿವಾನಂದ ಪಿಯು ಕಾಲೇಜು ಹಾಗೂ ರಾಯಬಾಗದ ಮಹಾವೀರ ಶಾಲೆಯಲ್ಲಿ ನಡೆಯುತ್ತಿರುವ ಮಸ್ಟರಿಂಗ್ ಕೇಂದ್ರಗಳಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಕೇಂದ್ರಗಳನ್ನು ತೆರೆಯಲಾಗಿದೆ. ಹುಕ್ಕೇರಿಯ ಎಸ್‌ಕೆ ಪಿಯು ಕಾಲೇಜು, ಅಥಣಿಯ ಎಸ್ಎಸ್ಎಂಎಸ್, ಕಾಗವಾಡದ ಶಿವಾನಂದ ಪಿಯು ಕಾಲೇಜು ಹಾಗೂ ರಾಯಬಾಗದ ಮಹಾವೀರ ಶಾಲೆಯಲ್ಲಿ ನಡೆಯುತ್ತಿರುವ ಮಸ್ಟರಿಂಗ್ ಕೇಂದ್ರಗಳಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಭೇಟಿ ನೀಡಿ ಪರಿಶೀಲಿಸಿದರು.

ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಲೋಪಗಳಾಗದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಹುಕ್ಕೇರಿ, ಅಥಣಿ, ರಾಯಬಾಗ, ಕಾಗವಾಡ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್‌ರು ಉಪಸ್ಥಿತರಿದ್ದರು.

6ಸಿಕೆಡಿ1: ಚಿಕ್ಕೋಡಿ ಲೋಕಸಭೆ ಚುನಾವಣೆ ಹಿನ್ನಲೆ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರಗಳಿಗೆ ಚುನಾವಣಾಧಿಕಾರಿ ರಾಹುಲ ಶಿಂಧೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಚುರುಕಿನಿಂದ ನಡೆದ ಮಸ್ಟರಿಂಗ್‌ ಕಾರ್ಯಮೇ7 ರಂದು ನಡೆಯಲಿರುವ 2ನೇ ಹಂತದ ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರ ಸಂಪೂರ್ಣ ಸಜ್ಜಾಗಿದ್ದು, ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಕಾರ್ಯ ಚುರುಕಿನಿಂದ ನಡೆಯಿತು. ಚುನಾವಣೆ ಆಯೋಗದ ನಿರ್ದೇಶನದಂತೆ ಸಿಬ್ಬಂದಿ ಸೋಮವಾರ ತಾವು ನಿಯೋಜನೆಗೊಂಡ ಮತಕೇಂದ್ರಗಳಿಗೆ ತೆರಳಿದರು.ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಕಾಗವಾಡ, ಕುಡಚಿ, ಅಥಣಿ, ಯಮಕನಮರಡಿ, ಹುಕ್ಕೇರಿ ಹೀಗೆ 8 ವಿಧಾನಸಭೆ ಕ್ಷೇತ್ರಗಳಿದ್ದು, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ 8,85,200 ಪುರುಷ, 8,76,414 ಮಹಿಳಾ ಹಾಗೂ ಇತರೆ 80 ಮತದಾರರು ಸೇರಿದಂತೆ ಒಟ್ಟು 17,61,694 ಮತದಾರರಿದ್ದಾರೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ 1,17,367 ಪುರುಷ, 1,17,396 ಮಹಿಳೆಯರು, 7 ಇತರೆ ಮತದಾರರು ಸೇರಿ ಒಟ್ಟು 2,34,770 ಮತದಾರರಿದ್ದಾರೆ. ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ 1,16,100 ಪುರುಷ, 1,16,856 ಮಹಿಳೆಯರು ಇತರೆ 14 ಸೇರಿ ಒಟ್ಟು 2,32,970 ಮತದಾರರಿದ್ದಾರೆ. ಅಥಣಿ ಕ್ಷೇತ್ರದಲ್ಲಿ 1,21,426 ಪುರುಷ, 1,18,216 ಮಹಿಳೆಯರು, ಇತರೆ 4 ಒಟ್ಟು 2,39,646 ಮತದಾರರಿದ್ದಾರ. ಕಾಗವಾಡ ಕ್ಷೇತ್ರದಲ್ಲಿ 1,03,609 ಪುರುಷ, 1,01,535 ಮಹಿಳಾ ಮತದಾರರು. 8 ಇತರೆ ಸೇರಿದಂತೆ ಒಟ್ಟು 2,05,152 ಮತದಾರರಿದ್ದಾರೆ. ಕುಡಚಿ ಕ್ಷೇತ್ರದಲ್ಲಿ 1,03,985 ಪುರುಷ, 1,00,092 ಮಹಿಳೆಯರು 18 ಇತರೆ ಸೇರಿ 2,04,095 ಮತದಾರರಿದ್ದಾರೆ. ಇನ್ನು, ರಾಯಬಾಗ ಕ್ಷೇತ್ರದಲ್ಲಿ 1,12,724 ಪುರುಷ, 1,08,591 ಮಹಿಳಾ, ಇತರೆ 10 ಸೇರಿ ಒಟ್ಟು 2,21,325 ಮತದಾರಿದ್ದಾರೆ. ಹುಕ್ಕೇರಿ- 1,06,816 ಪುರುಷ, 1,08,387 ಮಹಿಳೆ 10 ಇತರೆ ಸೇರಿ ಒಟ್ಟು 2,15,213 ಮತದಾರರು, ಯಮಕನಮರಡಿ ಕ್ಷೇತ್ರದಲ್ಲಿ 1,03,173 ಪುರುಷ, 1,05,341 ಮಹಿಳೆಯರು ಹಾಗೂ 9 ಇತರೆ ಮತದಾರರು ಸೇರಿ ಒಟ್ಟು 2,08,523 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.