ಆಲೂರು-ಸಕಲೇಶಪುರಯಲ್ಲಿ ೨೮೨ ಲೋಕಸಭೆ ಚುನಾವಣಾ ಮತಗಟ್ಟೆಗಳು

| Published : Apr 26 2024, 12:52 AM IST

ಆಲೂರು-ಸಕಲೇಶಪುರಯಲ್ಲಿ ೨೮೨ ಲೋಕಸಭೆ ಚುನಾವಣಾ ಮತಗಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ತಾಲೂಕು ಹಾಗೂ ಕಟ್ಟಾಯ ಹೋಬಳಿ ಒಳಗೊಂಡಂತೆ ೯ ಮಾದರಿ ಮತಗಟ್ಟೆ, ಐದು ಪಿಂಕ್ ಮತಗಟ್ಟೆ, ಒಂದು ಟ್ರೈಬಲ್ ಹಾಗೂ ೬೨ ಕಠಿಣ ಮತಗಟ್ಟೆ ಸೇರಿದಂತೆ ಒಟ್ಟು ೨೮೨ ಮತಗಟ್ಟೆ ಸ್ಥಾಪಿಸಲಾಗಿದೆ.

ಲೋಕಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಲೋಕಸಭಾ ಚುನಾವಣೆ ಮತದಾನಕ್ಕೆ ಸಕಲೇಶಪುರ ಉಪವಿಭಾಗದ ಅಧಿಕಾರಿಗಳು ಸಕಲ ಸಿದ್ದತೆ ಕೈಗೊಂಡಿದ್ದಾರೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ತಾಲೂಕು ಹಾಗೂ ಕಟ್ಟಾಯ ಹೋಬಳಿ ಒಳಗೊಂಡಂತೆ ೯ ಮಾದರಿ ಮತಗಟ್ಟೆ, ಐದು ಪಿಂಕ್ ಮತಗಟ್ಟೆ, ಒಂದು ಟ್ರೈಬಲ್ ಹಾಗೂ ೬೨ ಕಠಿಣ ಮತಗಟ್ಟೆ ಸೇರಿದಂತೆ ಒಟ್ಟು ೨೮೨ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗೆ ತೆರಳಲು ಬುಧವಾರವೇ ವಿವಿಧ ತಾಲೂಕಿನಿಂದ ಪಟ್ಟಣಕ್ಕೆ ಆಗಮಿಸಿದ್ದ ಅಧಿಕಾರಿಗಳಿಗೆ ತೆರಬೇತಿ ನೀಡಿದ ನಂತರ ಗುರುವಾರ ಮುಂಜಾನೆಯಿಂದ ಪಟ್ಟಣದ ಸಂತಜೋಸೆಫರ್ ಶಾಲೆಯ ಅವರಣದಲ್ಲಿ ಬೂತ್‌ಗಳನ್ನು ಹಂಚಲಾಗಿದ್ದು ೪೫ ಸಾರಿಗೆ ಬಸ್ ಸೇರಿದಂತೆ ಖಾಸಗಿ ವಾಹನಗಳ ಮೂಲಕ ಮತಯಂತ್ರಗಳನ್ನು ಸಾಗಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ ಹೇಳಿದರು.

ಪ್ರತಿಯೊಂದು ಮತಗಟ್ಟೆಯಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ನಾಲ್ವರು ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದು ಹೆಚ್ಚವರಿಯಾಗಿ ೫೭ ಚುನಾವಣಾಧಿಕಾರಿ ಹಾಗು ೫೭ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದು. ಮತಗಟ್ಟೆ ವೀಕ್ಷಕರಾಗಿ ೨೧ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ಧಾರೆ ಎಂದು ಮಾಹಿತಿ ನೀಡಿದರು.

ಭದ್ರತೆ:

ಶಾಂತಿಯುತ ಮತದಾನಕ್ಕಾಗಿ ಪೋಲಿಸ್ ಇಲಾಖೆ ಸಹ ವ್ಯಾಪಕ ಕ್ರಮ ಕೈಗೊಂಡಿದ್ದು ಒಂದು ಕೆಎಸ್‌ಆರ್‌ಪಿ ತುಕಡಿ, ೯ ಸೆಂಟ್ರಲ್ ಪ್ಯಾರಾ ಮಿಲಿಟರಿ ತುಕಡಿ, ೯ ಮೀಸಲು ತುಕಡಿ, ಪೋಲಿಸ್ ಅಧಿಕಾರಿಗಳನ್ನೊಳಗೊಂಡ ೧೪ ಸೆಕ್ಟರ್ ಮೊಬೈಲ್ ವಾಹನಗಳು ಪ್ರತಿ ೨೦ ಮತಗಟ್ಟೆಗೆ ಭೇಟಿ ನೀಡಲಿವೆ. ನಕ್ಸಲ್ ಪೀಡಿತ ಹಾಗೂ ಕಠಿಣ ಮತಗಟ್ಟೆಗಳಲ್ಲಿ ನಾಲ್ವರು ಸೆಂಟ್ರಲ್ ಮಿಲಿಟರಿ ಪೋರ್ಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದರೆ, ಸಾಮಾನ್ಯ ಮತಗಟ್ಟೆಗಳಲ್ಲಿ ಒಬ್ಬ ಪೋಲಿಸ್ ಅಥವಾ ಹೋಂಗಾರ್ಡ್ ಸಿಬ್ಬಂದಿ ಇರಲಿದ್ದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೀಸಲು ತುಕಡಿ ಹೊರತುಪಡಿಸಿ ಸುಮಾರು ೬೦೦ಕ್ಕೂ ಅಧಿಕ ಭದ್ರತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಡಿವೈಎಸ್‌ಪಿ ಪ್ರಮೋದ್ ಕುಮಾರ್ ಜೈನ್ ಮಾಹಿತಿ ನೀಡಿದರು.

ಸಕಲೇಶಪುರದಲ್ಲಿ ಮತಗಟ್ಟೆಗೆ ತೆರಳುತ್ತಿರುವ ಸಿಬ್ಬಂದಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಯಿತು.