ಐಪಿಎಲ್‌: ಡು ಆರ್‌ ಡೈ ಪಂದ್ಯದಲ್ಲಿ ಇಂದು ಡೆಲ್ಲಿಗೆ ರಾಜಸ್ಥಾನ ರಾಯಲ್ಸ್‌ ಸವಾಲು

| Published : May 07 2024, 01:03 AM IST / Updated: May 07 2024, 04:07 AM IST

ಐಪಿಎಲ್‌: ಡು ಆರ್‌ ಡೈ ಪಂದ್ಯದಲ್ಲಿ ಇಂದು ಡೆಲ್ಲಿಗೆ ರಾಜಸ್ಥಾನ ರಾಯಲ್ಸ್‌ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಐಪಿಎಲ್‌ನಲ್ಲಿ ರೋಚಕ ಹಣಾಹಣಿ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳಲಿದೆ ರಿಷಭ್ ಪಂತ್‌ ಪಡೆ. ಗೆದ್ದು ಮತ್ತೊಮ್ಮೆ ಅಗ್ರಸ್ಥಾನಕ್ಕೆ ಲಗ್ಗೆಯಿಡಲು ಕಾಯುತ್ತಿದೆ ರಾಜಸ್ಥಾನ ರಾಯಲ್ಸ್‌.

ನವದೆಹಲಿ: 11 ಪಂದ್ಯಗಳಲ್ಲಿ 6ರಲ್ಲಿ ಸೋತು, ಕೇವಲ 5 ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌, ಲೀಗ್‌ ಹಂತದ ತನ್ನ 12ನೇ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ. 

ಡೆಲ್ಲಿ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತನ್ನ ಸ್ಫೋಟಕ ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ.ಮತ್ತೊಂದೆಡೆ 10 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ ಈಗಾಗಲೇ ಪ್ಲೇ-ಆಫ್‌ ಪ್ರವೇಶಿಸುವುದನ್ನು ಬಹುತೇಕ ಖಚಿತಪಡಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್‌, ಈ ಪಂದ್ಯದಲ್ಲಿ ಜಯಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಮತ್ತೊಂದು ಜಯ ಪ್ಲೇ-ಆಫ್‌ ಪ್ರವೇಶವನ್ನು ಅಧಿಕೃತಗೊಳಿಸಲಿದೆ.

ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಬೇಕಿದ್ದರೆ ಡೆಲ್ಲಿಯ ಸ್ಪಿನ್‌ ಜೋಡಿಯಾದ ಅಕ್ಷರ್‌ ಪಟೇಲ್‌ (ಎಕಾನಮಿ 7.24) ಹಾಗೂ ಕುಲ್ದೀಪ್‌ ಯಾದವ್‌ (ಎಕಾನಮಿ 8.45) ಅಸಾಧಾರಣ ಪ್ರದರ್ಶನ ತೋರಬೇಕು. 

ಈ ಇಬ್ಬರು ಮಾತ್ರ 9ಕ್ಕಿಂತ ಕಡಿಮೆ ಎಕಾನಮಿ ರೇಟ್‌ ಹೊಂದಿದ್ದಾರೆ. ಖಲೀಲ್‌ (9.47), ಮುಕೇಶ್‌ (11.05), ನೋಕಿಯ(13.36)ರಿಂದ ಸುಧಾರಿತ ಪ್ರದರ್ಶನ ಮೂಡಿಬಂದರಷ್ಟೇ ಡೆಲ್ಲಿ ಜಯದ ಆಸೆ ಜೀವಂತವಾಗಿರಿಸಿಕೊಳ್ಳಬಹುದು.ಮತ್ತೊಂದೆಡೆ ರಾಯಲ್ಸ್‌ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಕೇವಲ 1 ರನ್‌ನಿಂದ ಸೋತಿತ್ತು. ತಂಡ ತನ್ನ ತಾರಾ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌, ಆರ್‌.ಅಶ್ವಿನ್‌ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ.

ಒಟ್ಟು ಮುಖಾಮುಖಿ: 28

ರಾಜಸ್ಥಾನ: 15ಡೆಲ್ಲಿ: 13

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌(ನಾಯಕ), ಪರಾಗ್‌, ಹೆಟ್ಮೇಯರ್‌, ಪೋವೆಲ್‌, ಜುರೆಲ್‌, ಅಶ್ವಿನ್‌, ಬೌಲ್ಟ್‌, ಆವೇಶ್‌, ಸಂದೀಪ್‌, ಚಹಲ್‌.ಡೆಲ್ಲಿ: ಪೃಥ್ವಿ, ಫ್ರೇಸರ್‌, ಪೊರೆಲ್‌, ಹೋಪ್‌, ಪಂತ್‌ (ನಾಯಕ), ಅಕ್ಷರ್‌, ಸ್ಟಬ್ಸ್‌, ಕುಶಾಗ್ರ, ಕುಲ್ದೀಪ್, ರಸಿಖ್‌ ಸಲಾಂ, ಲಿಜಾಡ್‌ ವಿಲಿಯಮ್ಸ್‌, ಖಲೀಲ್‌.

ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ