ಇಸ್ರೇಲ್‌ ಬೆದರಿಕೆ ಬೆನ್ನಲ್ಲೇ ಕದನ ವಿರಾಮಕ್ಕೆ ಹಮಾಸ್‌ ಒಪ್ಪಿಗೆ

| Published : May 07 2024, 01:03 AM IST / Updated: May 07 2024, 03:58 AM IST

ಇಸ್ರೇಲ್‌ ಬೆದರಿಕೆ ಬೆನ್ನಲ್ಲೇ ಕದನ ವಿರಾಮಕ್ಕೆ ಹಮಾಸ್‌ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆದರೆ ಇಸ್ರೇಲ್‌ ಮೌನವಹಿಸಿದ್ದು, ಈ ಕುರಿತು ಪರಸ್ಪರ ಒಪ್ಪಿಗೆ ದೊರೆತ ಬಳಿಕವಷ್ಟೇ ಇದು ಅಧಿಕೃತವಾಗಲಿದೆ.

ಜೆರುಸಲೇಂ: ಪ್ಯಾಲೆಸ್ತೀನ್‌ನ ರಫಾ ನಗರದ ಮೇಲೆ ದಾಳಿ ಮಾಡಲಾಗುವುದು. ಹೀಗಾಗಿ ಅಲ್ಲಿನ 1 ಲಕ್ಷ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂಬ ಇಸ್ರೇಲ್‌ ಬೆದರಿಕೆ ಬೆನ್ನಲ್ಲೇ ಈಜಿಪ್ಟ್‌-ಕತಾರ್‌ ಪ್ರಸ್ತಾಪ ಮಾಡಿದ್ದ ಕದನ ವಿರಾಮಕ್ಕೆ ಹಮಾಸ್‌ ಉಗ್ರರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಮರಕ್ಕೆ ವಿರಾಮ ಬೀಳಬಹುದು ಎಂಬ ಆಶಾವಾದ ಉಂಟಾಗಿದೆ.

ಆದರೆ ಹಮಾಸ್‌ ಕದನವಿರಾಮವನ್ನು ಇಸ್ರೇಲ್‌ ಒಪ್ಪಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪರಿಶೀಲನೆಯಲ್ಲಿದೆ ಎಂದಷ್ಟೇ ಹೇಳಿದೆ.

ಪ್ರಸ್ತಾವದ ಪ್ರಕಾರ ಇಸ್ರೇಲ್‌ನ ಎಲ್ಲ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಹಮಾಸ್‌ ಒಪ್ಪಿಕೊಂಡಿದೆ.