ಸಾರಾಂಶ
ಎಚ್‌ಐವಿ ಸೋಂಕಿತ ವ್ಯಕ್ತಿಗೆ ಜ್ಯೂಸ್‌ನಲ್ಲಿ ಮತ್ತು ಬರಿಸುವ ಔಷಧಿ ನೀಡಿ ಸಲಿಂಗಕಾಮಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೀಣ್ಯ ದಾಸರಹಳ್ಳಿ : ಎಚ್ಐವಿ ಸೋಂಕಿತನ ಮೇಲೆ ಸಲಿಂಗಕಾಮಿ ಅತ್ಯಾಚಾರ ನಡೆಸಿ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
56 ವರ್ಷದ ಎಚ್ಐವಿ ಸೋಂಕಿತ ಕಳೆದೊಂದು ವರ್ಷದ ಹಿಂದೆ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಎನ್‌ಜಿಓನಲ್ಲಿ ಕೆಲಸ ಮಾಡುತ್ತಿದ್ದರು. ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಮನೆಗೆ ಬಂದಿದ್ದ ಪರಿಚಯಸ್ಥ ಸಲಿಂಗಕಾಮಿ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಹಾಕಿ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಸಲಿಂಗಕಾಮಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಮನೆಯ ಬೀರುವಿನಲ್ಲಿದ್ದ 88 ಗ್ರಾಂ ಚಿನ್ನಭರಣ, ₹20 ಸಾವಿರ ನಗದು, ಮೊಬೈಲ್, ದೋಚಿ ಪರಾರಿಯಾಗಿದ್ದಾನೆ.
ಸೋಂಕಿತ ಬೆಳಗ್ಗೆ ಎಚ್ಚರಗೊಂಡಾಗ ಕೃತ್ಯ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅರೋಪಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.