ಜೈಸಿಂಗಪುರ ಬಳಿ ಬೋನಿಗೆ ಬಿದ್ದ ಚಿರತೆ
KannadaprabhaNewsNetwork | Published : Oct 06 2023, 01:16 AM IST
ಜೈಸಿಂಗಪುರ ಬಳಿ ಬೋನಿಗೆ ಬಿದ್ದ ಚಿರತೆ
ಸಾರಾಂಶ
ಸಂಡೂರು ತಾಲೂಕಿನ ಜೈಸಿಂಗಪುರ ಗ್ರಾಮದ ಬಳಿ ಬೋನಿಗೆ ಚಿರತೆ ಬಿದ್ದಿದೆ
ಕನ್ನಡಪ್ರಭ ವಾರ್ತೆ ಸಂಡೂರು ತಾಲೂಕಿನ ಜೈಸಿಂಗಪುರ ಗ್ರಾಮದ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಬುಧವಾರ ರಾತ್ರಿ ಸುಮಾರು ಒಂದು ವರ್ಷ ವಯಸ್ಸಿನ ಹೆಣ್ಣುಚಿರತೆಯೊಂದು ಸೆರೆಯಾಗಿದೆ. ಕೆಲ ದಿನಗಳಿಂದ ಗ್ರಾಮದಲ್ಲಿನ ನಾಯಿಗಳಿಗೆ ಚಿರತೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಳವಡಿಸಿದ್ದ ಬೋನಿನಲ್ಲಿ ಚಿರೆತೆ ಸೆರೆಯಾಗಿರುವ ವಿಷಯ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿನಲ್ಲಿ ಸೆರೆಯಾಗಿರುವ ಚಿರತೆಯನ್ನು ಮೆಲಾಧಿಕಾರಿಗಳ ನಿರ್ದೇಶನದಂತೆ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಉತ್ತರ ವಲಯ ಅರಣ್ಯಾಧಿಕಾರಿ ದಾದಾ ಖಲಂದರ್ ತಿಳಿಸಿದರು.