ಹಾವು ಕಡಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

| Published : Jun 08 2024, 12:30 AM IST / Updated: Jun 08 2024, 05:00 AM IST

snake .

ಸಾರಾಂಶ

ಕೊಳಕಮಂಡಲ ಹಾವಿನ ಕಡಿತಕ್ಕೊಳಗಾಗಿದ್ದ ತಾಲೂಕಿನ ಹೊಸಬೂದನೂರು ಗ್ರಾಮದ ಬಿ.ಬಿ.ನಾಗರಾಜು (46) ಅವರು ಶುಕ್ರವಾರ ಮೃತಪಟ್ಟಿದ್ದಾರೆ. ಕಳೆದ ಜೂ.4ರಂದು ಹಾವು ಕಡಿತಕ್ಕೊಳಗಾಗಿದ್ದ ಬಿ.ಬಿ.ನಾಗರಾಜು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

 ಮಂಡ್ಯ :  ಕೊಳಕಮಂಡಲ ಹಾವಿನ ಕಡಿತಕ್ಕೊಳಗಾಗಿದ್ದ ತಾಲೂಕಿನ ಹೊಸಬೂದನೂರು ಗ್ರಾಮದ ಬಿ.ಬಿ.ನಾಗರಾಜು (46) ಅವರು ಶುಕ್ರವಾರ ಮೃತಪಟ್ಟಿದ್ದಾರೆ. ಕಳೆದ ಜೂ.4ರಂದು ಹಾವು ಕಡಿತಕ್ಕೊಳಗಾಗಿದ್ದ ಬಿ.ಬಿ.ನಾಗರಾಜು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಪುಟ್ಟಲಕ್ಷ್ಮಿ, ಪುತ್ರ ದುಶ್ಯಂತ್‌ಗೌಡ ಇದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ (ಜೂ.8) ಬೆಳಗ್ಗೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಮೇಲುಕೋಟೆ:

ಶ್ರೀಯೋಗನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 65 ರಿಂದ 70 ವರ್ಷ ವಯಸ್ಸಾಗಿದ್ದು 5.3 ಅಡಿ ಎತ್ತರವಿದ್ದು, ಧೃಢಕಾಯ ಶರೀರ, ಗೋಧಿ ಮೈ ಬಣ್ಣ, ತಲೆಯಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲಿದೆ. ಬಲಗೈ ಮೇಲೆ ಶಿವಮ್ಮ ಎಂದು ಹಸಿರು ಹಚ್ಚೆ ಇದ್ದು, ಮೈಮೇಲೆ ಹಳದಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಲಾಡಿ ನಿಕ್ಕರ್ ಧರಿಸಿದ್ದಾರೆ. ವಾರಸುದಾರರಿದ್ದಲ್ಲಿ ದೂ-08236-299800/252016 ನ್ನು ಸಂಪರ್ಕಿಸಬಹುದು. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಿಚಿತ ಶವ ಪತ್ತೆ

ಶ್ರೀರಂಗಪಟ್ಟಣ: ತಾಲೂಕಿನ ಗಂಜಾಂ ಗ್ರಾಮ ಮಾರಿಗುಡಿ ಬೀದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 60 ರಿಂದ 65 ವರ್ಷ ವಯಸ್ಸಾಗಿದ್ದು 5.3 ಅಡಿ ಎತ್ತರ ಎತ್ತರವಿದ್ದು, ಕೋಲುಮುಖ, ಕೃಷವಾದ ಶರೀರ, ಬಿಳಿ ತಲೆ ಕೂದಲು, ಗಡ್ಡ ಬಿಟ್ಟಿದ್ದಾರೆ. ಬಲ ಎದೆ ಮೇಲೆ ಕಪ್ಪು ಕಾರಳ್ಳಿದ್ದು, ನೀಲಿ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಶರ್ಟ್ ಧರಿಸಿದ್ದಾರೆ.ವಾರಸುದಾರರಿದ್ದಲ್ಲಿ ದೂ-08232-22488/9480804800 ನ್ನು ಸಂಪರ್ಕಿಸಬಹುದು ಎಂದು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.