ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿ ಮಂಗಳವಾರ ಸಂಜೆ ಜರುಗಿದೆ. ಮೂಲತಃ ಚಿಕ್ಕಬಳ್ಳಾಪುರ ಬಳಗೆರೆ ಗ್ರಾಮದ ಟಿ.ರಮೇಶ್ (35) ಆತ್ಮಹತ್ಯೆಗೆ ಶರಣಾದ ಪೇದೆ.

ಮದ್ದೂರು: ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿ ಮಂಗಳವಾರ ಸಂಜೆ ಜರುಗಿದೆ.

ಮದ್ದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ರಮೇಶ್ (35) ಆತ್ಮ*ತ್ಯೆಗೆ ಶರಣಾದ ಪೇದೆ. ತಾಲೂಕ ಕಚೇರಿ ಸಮೀಪದ ಪೊಲೀಸ್ ವಸತಿ ಗೃಹದಲ್ಲಿ ಸಂಜೆ ನೇಣು ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಮೂಲತಃ ಚಿಕ್ಕಬಳ್ಳಾಪುರ ಬಳಗೆರೆ ಗ್ರಾಮದ ರಮೇಶ್‌ ಪತ್ನಿ ಪುಷ್ಪಲತಾ, ಒಂದೂವರೆ ವರ್ಷದ ಹೆಣ್ಣು ಮಗು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಕಳೆದ ಕೆಲ ದಿನಗಳ ಹಿಂದೆ ಮದ್ದೂರು ಠಾಣೆಗೆ ವರ್ಗವಾಗಿ ನ್ಯಾಯಾಲಯದ ವಾರೆಂಟ್ ಮತ್ತು ಸಮನ್ಸ್ ಜಾರಿ ಮಾಡುವ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ನಂತರ ತಮ್ಮ ಮನೆಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ರಮೇಶ್‌ ಕೊಠಡಿಯೊಂದರಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಮೇಶ್‌ ಅವರ ಮರಣೋತ್ತರ ಪರೀಕ್ಷೆ

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ರಮೇಶ್‌ ಅವರ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಮದ್ದೂರು ಠಾಣೆಗೆ ತಂದು ಕೆಲಕಾಲ ಸಿಬ್ಬಂದಿ ಮತ್ತು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ನಂತರ ಪಾರ್ಥಿವ ಶರೀರವನ್ನು ಹುಟ್ಟೂರು ಬಳಗೆರೆ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಸಶಸ್ತ್ರ ಪೊಲೀಸ್ ಗೌರವ ರಕ್ಷೆ ಸಲ್ಲಿಸಿದ ನಂತರ ಸಂಜೆ ಕುಟುಂಬದವರ ಸಮ್ಮುಖದಲ್ಲಿ ರಮೇಶ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಕೀಲರ ಸಂತಾಪ:

ಪೊಲೀಸ್ ಪೇದೆ ಟಿ.ರಮೇಶ್ ರವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ವಕೀಲರು ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಸಂತಾಪ ಸೂಚಿಸಿದರು.