ಖಾಸಗಿ ಸಾಲಗಾರರ ಕಾಟದಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ..!

| N/A | Published : Jan 26 2025, 01:32 AM IST / Updated: Jan 26 2025, 04:25 AM IST

ಸಾರಾಂಶ

ಖಾಸಗಿ ಸಾಲಗಾರರ ಕಾಟದಿಂದ ಬೇಸತ್ತು ಯುವ ರೈತ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಒಳಗೆರೆಮೆಣಸ ಗ್ರಾಮದಲ್ಲಿ ನಡೆದಿದೆ.

  ಕೆ.ಆರ್.ಪೇಟೆ : ಖಾಸಗಿ ಸಾಲಗಾರರ ಕಾಟದಿಂದ ಬೇಸತ್ತು ಯುವ ರೈತ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಒಳಗೆರೆಮೆಣಸ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜೇಗೌಡರ ಲೋಹಿತ್ ಕುಮಾರ್ (35) ಆತ್ಮಹತ್ಯೆ ಮಾಡಿಕಂಡ ಯುವರೈತ.

ಲೋಹಿತ್ ಕುಮಾರ್ ತನ್ನ ಸ್ವಗ್ರಾಮದ ವ್ಯಕ್ತಿಯಿಂದ ಸುಮಾರು 2 ಲಕ್ಷ ರು. ಸಾಲ ಪಡೆದಿದ್ದರು. ಸಾಲಕೊಟ್ಟ ವ್ಯಕ್ತಿ ಅಸಲು ಮತ್ತು ಬಡ್ಡಿ ಸೇರಿ 5 ಲಕ್ಷ ರು. ನೀಡುವಂತೆ ಮೃತ ಲೋಹಿತ್ ಕುಮಾರ್‌ಗೆ ಕಿರುಕುಳ ನೀಡುತ್ತಿದ್ದ. ಸಾಲದ ಸಂಬಂಧ ಇತ್ತೀಚೆಗೆ ಗ್ರಾಮದಲ್ಲಿ ಗಲಾಟೆ ನಡೆದು ಸಾಲ ನೀಡಿದ್ದವರು ಲೋಹಿತ್ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಸಂಬಂಧ ಲೋಹಿತ್ ಕುಮಾರ್ ಜನವರಿ 21ರಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರಿಗೆ ದೂರು ನೀಡಿದ ನಂತರವೂ ಸಾಲಗಾರರ ಕಿರುಕುಳ ಮುಂದುವರಿದಿದ್ದರಿಂದ ಬೇಸತ್ತ ಲೋಹಿತ್ ಕುಮಾರ್ ಶನಿವಾರ ಮುಂಜಾನೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಾವಿದ ಪ್ರಕಾಶ್‌ಗೆ ಮಾತೃವಿಯೋಗ

ಮಂಡ್ಯ: ಇಲ್ಲಿನ ಹೊಸಹಳ್ಳಿ ಬಡಾವಣೆ ಐದನೇ ಕ್ರಾಸ್‌ನಲ್ಲಿರುವ ಕಲಾವಿದ ಪ್ರಕಾಶ್ ಅವರ ತಾಯಿ ಲಕ್ಷ್ಮಮ್ಮ (೭೪) ಅವರು ಶನಿವಾರ ಬೆಳಗ್ಗೆ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಮ್ಮ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಆರು ಮಂದಿ ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಹಾಲಹಳ್ಳಿಯ ಸತ್ಯಹರಿಶ್ಚಂದ್ರ ಸ್ಮಶಾನದಲ್ಲಿ ನೆರವೇರಿತು.