ಪಾರ್ಟಿ ಮಾಡಲು ಹಣ ಕೊಡದಿದ್ದಕ್ಕೆ ಯುವಕ ಆತ್ಮಹತ್ಯೆ

| Published : Jan 02 2024, 02:15 AM IST / Updated: Jan 03 2024, 04:15 PM IST

suicide

ಸಾರಾಂಶ

ಹೊಸ ವರ್ಷದ ಹಿನ್ನೆಲೆ ಪಾರ್ಟಿಗೆ ಮನೆಯಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೆಳಗಾವಿ: ಹೊಸ ವರ್ಷದ ಹಿನ್ನೆಲೆ ಪಾರ್ಟಿ ಮಾಡಲು ಮನೆಯಲ್ಲಿ ಹಣ ನೀಡಲು ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕಣಬರ್ಗಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕಣಬರ್ಗಿಯ ಗೋಕಾಕ ರಸ್ತೆಯ ನಿವಾಸಿ ಸಿದ್ದರಾಯ ಅಡಿವೆಪ್ಪ ಶಿಗೀಹಳ್ಳಿ (25) ಆತ್ಮಹತ್ಯೆಗೆ ಶರಣಾದ ಯುವಕ. ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಭಾನುವಾರ ರಾತ್ರಿ ಪಾರ್ಟಿ ಮಾಡಲು ₹10 ಸಾವಿರ ಹಣ ಹೇಳಿದ್ದಾನೆ. ರೈತ ಕುಟುಂಬವಾಗಿದ್ದರಿಂದ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಇದರಿಂದ ಮನನೊಂದು ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಾನೆ. ಈತನ ನಡೆಯಿಂದ ಅನುಮಾನಗೊಂಡ ಕುಟುಂಬಸ್ಥರು ಕ್ಷಣವೇ ಹೊಲಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಹೊಲದಲ್ಲಿದ್ದ ಗಿಡಕ್ಕೆ ನೇಣು ಹಾಕಿಕೊಂಡು ನೇತಾಡುತ್ತಿದ್ದನು. ತಕ್ಷಣ ಕುಟುಂಬಸ್ಥರು ಆತನನ್ನು ರಕ್ಷಿಸಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕೆಲವು ನಿಮಿಷಗಳಲ್ಲಿಯೇ ಸಿದ್ದರಾಯ ಶಿಗೀಹಳ್ಳಿ ಮೃತಪಟ್ಟಿದ್ದಾನೆ ಎಂದು ಆತನ ಸಹೋದರ ಬಾಬು ಶಿಗೀಹಳ್ಳಿ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಕುರಿತು ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.