ಮಳವಳ್ಳಿ ಪಟ್ಟಣದ ಹೊರ ವಲಯದ ಮಾರೇಹಳ್ಳಿ ಕೆರೆ ಬಳಿಯ ನ.24ರಂದು ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಡ್ಡರಹಳ್ಳಿ ಗ್ರಾಮದ ಮೋಹಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಹೊರ ವಲಯದ ಮಾರೇಹಳ್ಳಿ ಕೆರೆ ಬಳಿಯ ನ.24ರಂದು ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಡ್ಡರಹಳ್ಳಿ ಗ್ರಾಮದ ಮೋಹಿತ್ (20) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಾರೇಹಳ್ಳಿ ಕೆರೆ ಏರಿ ರಸ್ತೆಯಲ್ಲಿ ನ.24ರಂದು ಬೈಕ್ ನಲ್ಲಿ ತೆರಳುತ್ತಿದ್ದ ಮೋಹಿತ್‌ಗೆ ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ: ವ್ಯಕ್ತಿ ನೇಣಿಗೆ ಶರಣು

ಮದ್ದೂರು: ಸಾಲಬಾಧೆಯಿಂದ ವ್ಯಕ್ತಿ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ತಮಿಳು ಕಾಲೋನಿಯಲ್ಲಿ ಸೋಮವಾರ ಜರುಗಿದೆ.

ಕಾಲೋನಿಯ ಲೇ, ರಾಮ ಜಯ ಪುತ್ರ ತಿ.ತೆನ್ನರಸು (38) ಆತ್ಮಹತ್ಯೆ ಶರಣಾದ ವ್ಯಕ್ತಿ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ಖಾಸಗಿಯಾಗಿ ಸಾಲ ಮಾಡಿಕೊಂಡಿದ್ದನ್ನು. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಕಾಲೋನಿಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಅಸ್ವಸ್ಥಗೊಂಡಿದ್ದನು. ಕುಟುಂಬದವರು ಈತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಮಯದ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪರಿಚಿತ ಶವ ಪತ್ತೆ

ಮದ್ದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪಕ್ಕದ ಶಾದಿ ಮಹಲ್ ಮುಂಭಾಗ ಸುಮಾರು 70 ವರ್ಷ ವಯಸ್ಸಿನ ಅಪರಿಚಿತ ವೃದ್ಧನ ಶವ ಸೋಮವಾರ ಪತ್ತೆಯಾಗಿದೆ. ಮೃತನು ಸುಮಾರು 5.6 ಅಡಿ ಎತ್ತರ, ಗುಂಡು ಮುಖ, ಕಪ್ಪುತಲೆಕೂದಲು, ಈತನ ಮೈಮೇಲೆ ಕಾಪಿ ಬಣ್ಣದ ಶರಟು ಮತ್ತು ಪ್ಯಾಂಟ್ ಧರಿಸಿದ್ದಾನೆ. ನೀಲಿ ಮಿಶ್ರಿತ ಬಿಳಿ ಗೆರೆವುಳ್ಳ ತುಂಬ ತೋಳಿನ ಶರಟು ಇದ್ದು, ಇತರ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸು ವಂತೆಕೋರಲಾಗಿದೆ.