ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ
KannadaprabhaNewsNetwork | Published : Oct 30 2023, 12:30 AM IST / Updated: Oct 30 2023, 12:31 AM IST
ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ
ಸಾರಾಂಶ
ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆಬೆಂಗಳೂರು- ಮೈಸೂರು ರೈಲು ಮಾರ್ಗದಲ್ಲಿ ನಡೆದ ಘಟನೆ
ಮದ್ದೂರು: ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹಿಂಭಾಗದ ಬೆಂಗಳೂರು- ಮೈಸೂರು ರೈಲು ಮಾರ್ಗದಲ್ಲಿ ನಡೆದಿದೆ. ಮೃತ ವ್ಯಕ್ತಿಗೆ ಸುಮಾರು 55 ರಿಂದ 60 ವರ್ಷವಾಗಿದೆ. 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕೋಲುಮುಖ, ತಲೆಯಲ್ಲಿ 3 ಇಂಚು ಉದ್ದದ ಕಪ್ಪು, ಬಿಳಿ ಮಿಶ್ರಿತ ಕೂದಲು, ಕುರುಚಲು ಗಡ್ಡ, ಮೀಸೆ ಬಿಟ್ಟಿದ್ದಾರೆ. ಆಕಾಶ್ ನೀಲಿ ಬಣ್ಣದ ಅರ್ಧತೋಳಿನ ಶರ್ಟ್, ಕೆಂಪು, ನೀಲಿ ಬಣ್ಣದ ಜಾಕೆಟ್, ನೀಲಿ ಕೆಂಪು ಬಿಳಿ ಚೌಕಿನ ಲುಂಗಿ, ಸೊಂಟದಲ್ಲಿ ಕಪ್ಪು ಉಡುದಾರ, ಪ್ಲಾಸ್ಟಿಕ್ ಕಪ್ಪು ಬಣ್ಣದ ಚಪ್ಪಲಿ ಧರಿಸಿದ್ದಾರೆ. ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.