ಆನೇಕಲ್-ಹೊಸೂರು ಮುಖ್ಯ ರಸ್ತೆ ಗುಡ್ಡನಹಳ್ಳಿಯಿಂದ ಮತ್ತೆ ಪುಂಡರ ವ್ಹೀಲಿಂಗ್ ಹಾವಳಿ

| Published : Nov 28 2024, 12:31 AM IST / Updated: Nov 28 2024, 05:23 AM IST

ಆನೇಕಲ್-ಹೊಸೂರು ಮುಖ್ಯ ರಸ್ತೆ ಗುಡ್ಡನಹಳ್ಳಿಯಿಂದ ಮತ್ತೆ ಪುಂಡರ ವ್ಹೀಲಿಂಗ್ ಹಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಆನೇಕಲ್-ಹೊಸೂರು ಮುಖ್ಯ ರಸ್ತೆ ಗುಡ್ಡನಹಳ್ಳಿಯಿಂದ ಆನೇಕಲ್ ಬಸ್ ಡಿಪೋ ರಸ್ತೆಯಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮತ್ತೆ ಶುರುವಾಗಿದೆ. 15 ರಿಂದ 20 ವಯಸ್ಸಿನ ಹುಡುಗರು ಕನಿಷ್ಠ ಇಬ್ಬರಿಂದ ಮೂವರು ಬೈಕ್ ನಲ್ಲಿ ಕುಳಿತು ವ್ಹೀಲಿಂಗ್ ಮಾಡುತ್ತಾರೆ. 

 ಆನೇಕಲ್ : ಆನೇಕಲ್-ಹೊಸೂರು ಮುಖ್ಯ ರಸ್ತೆ ಗುಡ್ಡನಹಳ್ಳಿಯಿಂದ ಆನೇಕಲ್ ಬಸ್ ಡಿಪೋ ರಸ್ತೆಯಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮತ್ತೆ ಶುರುವಾಗಿದೆ. 15 ರಿಂದ 20 ವಯಸ್ಸಿನ ಹುಡುಗರು ಕನಿಷ್ಠ ಇಬ್ಬರಿಂದ ಮೂವರು ಬೈಕ್ ನಲ್ಲಿ ಕುಳಿತು ವ್ಹೀಲಿಂಗ್ ಮಾಡುತ್ತಾರೆ. ಹಿಂದೆ ಕುಳಿತವರು ಕೇಕೆ ಹಾಕಿ ಭಯ ಸೃಷ್ಟಿಸಿದರೆ ಮುಂದೆ ಕುಳಿತ ಚಾಲಕ ಕೆಲವೊಮ್ಮೆ ಅಡ್ಡಾದಿಡ್ಡಿ ಚಲಿಸಿ ಆತಂಕ ಸೃಷ್ಟಿಸುತ್ತಾರೆ.

ಬುಧವಾರ 2 ಡಿಯೋ ಬೈಕ್ ನಲ್ಲಿ ಬಂದಿದ್ದ ನಾಲ್ವರು ಪುಂಡರು ಶಿರಡಿ ಸಾಯಿ ಕಾಲೇಜ್ ನಿಂದ ವಿಶ್ವಚೇತನ ಕಾಲೇಜಿನವರೆಗೂ ವ್ಹೀಲಿಂಗ್ ಮಾಡಿದ್ದಾರೆ. ಇದರಿಂದ ಇತರ ವಾಹನ ಸವಾರರು ಯುವಕರ ಹುಚ್ಚಾಟದಿಂದಾಗಿ ಭಯಭೀತರಾದರು. ಪುಂಡರ ವ್ಹೀಲಿಂಗ್ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆನೇಕಲ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇನ್ಸ್‌ಪೆಕ್ಟರ್‌ ವಾರ್ನಿಂಗ್‌: ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಹಿಲೀಂಗ್ ಹಾವಳಿಯನ್ನು ಸಂಪೂರ್ಣ ತಡೆಯಲಾಗಿತ್ತು. ಈಗ ಮತ್ತೆ ವ್ಹಿಲೀಂಗ್‌ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು ಸ್ಥಳದಲ್ಲಿ ಲಭ್ಯ ವಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಶಾಲಾ ಕಾಲೇಜು ಬಿಡುವ ವೇಳೆ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಈ ಮೊದಲು ಇದೇ ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಾರಾಕಾಸ್ತ್ರವನ್ನು ರಸ್ತೆಗೆ ತಾಕಿಸಿ ಹವಾ ಸೃಷ್ಟಿಸುವವರ ಮೇಲೆ ಕ್ರಮ ಜರುಗಿಸಿ ಶಾಶ್ವತವಾಗಿ ತಡೆಯಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗುವುದನ್ನು ಸಹಿಸುವುದಿಲ್ಲ. ಕಡ್ಡಾಯವಾಗಿ ಹೆಲ್ಮೆಟ್ ಧಾರಣೆ, ಚಾಲನಾ ಪರವಾನಾಗಿ ಮತ್ತು ವಿಮೆ ಪತ್ರವನ್ನು ಹೊಂದಿರಲೇಬೇಕೆಂದು ಇನ್ ನ್ಸ್ಪೆಕ್ಟರ್ ತಿಪ್ಪೇಸ್ವಾಮಿ ವಾರ್ನಿಂಗ್ ನೀಡಿದ್ದಾರೆ.