ಸಾರಾಂಶ
ಅನ್ನ ಭಾಗ್ಯ ಯೋಜನೆ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಮೈಸೂರಿಗೆ ಸಾಗಾಟ ಮಾಡುತ್ತಿದ್ದ ಆಟೋವನ್ನು ಪಡಿತರ ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಟೋ ಚಾಲಕ ಪರಾರಿಯಾಗಿದ್ದಾನೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅನ್ನ ಭಾಗ್ಯ ಯೋಜನೆ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಮೈಸೂರಿಗೆ ಸಾಗಾಟ ಮಾಡುತ್ತಿದ್ದ ಆಟೋವನ್ನು ಪಡಿತರ ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಟೋ ಚಾಲಕ ಪರಾರಿಯಾಗಿದ್ದಾನೆ.ತಾಲೂಕಿನ ವಿವಿಧೆಡೆ ಅಕ್ಕಿ ಮತ್ತು ರಾಗಿಯನ್ನು ಸಂಗ್ರಹಿಸಿ ಮೈಸೂರಿಗೆ ಸಾಗಿರುತ್ತಿದ್ದ ಎನ್ನಲಾಗಿದೆ. ಆಟೋದಲ್ಲಿ ಸಂಗ್ರಹಿಸಿದ 122 ಕೆ.ಜಿ ಅಕ್ಕಿ, 30 ಕೆ.ಜಿ ರಾಗಿ ಹಾಗೂ ತೂಕದ ಯಂತ್ರವನ್ನು ಆಹಾರ ಇಲಾಖೆ ಅಧಿಕಾರಿ ಪೂಜಾ, ಗ್ರಾಮ ಲೆಕ್ಕಿಗ ನೇತೃತ್ವದಲ್ಲಿ ವಶಕ್ಕೆ ಪಡೆದು ಆಟೋ ಹಾಗೂ ಪಡಿತರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾಲಹಳ್ಳಿಯಲ್ಲಿ ಅಕ್ರಮವಾಗಿ ಪಡಿತರ ದವಸ ಧಾನ್ಯಗಳಾದ ಅಕ್ಕಿ, ರಾಗಿಯನ್ನು ಆಟೋದಲ್ಲಿ ಸಾಗಿಸುತ್ತಿರುವ ಮಾಹಿತಿಯನ್ನು ಜನ ಸಂಗ್ರಾಮ ಪರಿಷತ್ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಹಾಗೂ ಪಾಲಹಳ್ಳಿ ಗ್ರಾಮಸ್ಥರು ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.ಸ್ಥಳಕ್ಕೆ ಶ್ರೀರಂಗಪಟ್ಟಣ ಆಹಾರ ಇಲಾಖೆ ನಿರೀಕ್ಷಕಿ ಪೂಜಾ ಹಾಗೂ ಗ್ರಾಮಲೆಕ್ಕಿಗ ಇತರರು ಆಗಮಿಸಿದ ವೇಳೆ ಆಟೋರಿಕ್ಷಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಆಟೋ ಸಹಿತ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿ ಪರಾರಿಯಾದ ಆಟೋ ಚಾಲಕನ ಬಗ್ಗೆ ವಿವರಣೆ ನೀಡಿ ಅಧಿಕಾರಿಗಳು ಅಕ್ರಮ ಪಡಿತರ ಮಾರಾಟ ಕುರಿತಾಗಿ ಪೊಲೀಸರಿಗೆ ದೂರು ನೋಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಲು ಸಹಿತ ಆಟೋವನ್ನು ಠಾಣೆಗೆ ತಂದು, ಆಟೋ ಚಾಲಕನಿಗೆ ಬಲೆ ಬೀಸಿದ್ದಾರೆ.
ಜನಸಂಗ್ರಾಮ ಪರಿಷತ್ತಿನ ಸಂತೋಷ್, ಗಂಗಾಧರ್, ಆರ್.ಲೋಕೇಶ್, ಶೇಖರ್ ಸೇರಿದಂತೆ ಇತರರು ಅಕ್ರಮ ಪಡಿತರ ತುಂಬಿದ್ದ ಆಟೋ ಹಿಡಿಯುವಲ್ಲಿ ಸಹಕರಿಸಿದರು.ಪೊಲೀಸರಿಂದ ದಾಳಿ: 3 ಲೀಟರ್ ಅಕ್ರಮ ಮದ್ಯ ವಶ
ಹಲಗೂರು: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಶನಿವಾರ ದಾಳಿ ಮಾಡಿದ ಪೊಲೀಸರು 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ ಸಬ್ ಇನ್ಸ್‌ಪೆಕ್ಟರ್ ಲೋಕೇಶ ಮತ್ತು ಸಿಬ್ಬಂದಿ ಎರಡು ಮನೆಗಳು ಮತ್ತು ಒಂದು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿ ಇಟ್ಟಿದ್ದ 3 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿ ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿ ಬಿಡುಗಡೆ ಮಾಡಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.)
;Resize=(128,128))
;Resize=(128,128))
;Resize=(128,128))