ಪೇಸ್ಟ್‌ ರೂಪದಲ್ಲಿ ಚಿನ್ನ ಕದ್ದು ಸಾಗಣೆ ಮಾಡಿದ 3 ವಿದೇಶಿಗರ ಸೆರೆ; ಏರ್‌ಪೋರ್ಟ್‌ನಲ್ಲಿ ₹72 ಲಕ್ಷದ ಚಿನ್ನ ಜಪ್ತಿ

| Published : Feb 26 2024, 01:30 AM IST / Updated: Feb 26 2024, 01:31 AM IST

ಪೇಸ್ಟ್‌ ರೂಪದಲ್ಲಿ ಚಿನ್ನ ಕದ್ದು ಸಾಗಣೆ ಮಾಡಿದ 3 ವಿದೇಶಿಗರ ಸೆರೆ; ಏರ್‌ಪೋರ್ಟ್‌ನಲ್ಲಿ ₹72 ಲಕ್ಷದ ಚಿನ್ನ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮವಾಗಿ ಚಿನ್ನ ತರುತ್ತಿದ್ದ ಮೂವರು ವಿದೇಶಿಯರು ಸೇರಿದಂತೆ ಐವರನ್ನು ಸೆರೆ ಹಿಡಿದು ₹72.5 ಲಕ್ಷ ಮೌಲ್ಯದ 1.167 ಕೇಜಿ ಚಿನ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮವಾಗಿ ಚಿನ್ನ ತರುತ್ತಿದ್ದ ಮೂವರು ವಿದೇಶಿಯರು ಸೇರಿದಂತೆ ಐವರನ್ನು ಸೆರೆ ಹಿಡಿದು ₹72.5 ಲಕ್ಷ ಮೌಲ್ಯದ 1.167 ಕೇಜಿ ಚಿನ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೊಲಂಬೋದಿಂದ ಕೆಐಎಗೆ ಶುಕ್ರವಾರ ಬಂದಿಳಿದ ಇಬ್ಬರು ಶ್ರೀಲಂಕಾ ಪ್ರಜೆಗಳಿಂದ ₹18.47 ಲಕ್ಷ ಮೌಲ್ಯದ 288.54 ಗ್ರಾಂ ಚಿನ್ನ ಹಾಗೂ ಶನಿವಾರ ಬಂದಿಳಿದ ಓರ್ವ ಶ್ರೀಲಂಕಾ ಪ್ರಜೆ ಸೇರಿ ಮೂವರಿಂದ ₹54 ಲಕ್ಷ ಮೌಲ್ಯದ 878.98 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲಂಬೋದಿಂದ ಬಂದ ಆರೋಪಿಗಳು ಪೇಸ್ಟ್‌ ರೀತಿಯಲ್ಲಿ ಚಿನ್ನ ಸಾಗಿಸಿದರೆ, ಇನ್ನುಳಿದವರು ಬಟ್ಟೆಗಳು ಅಡಗಿಸಿಕೊಂಡು ಬಂದಿದ್ದರು. ಶ್ರೀಲಂಕಾದಿಂದ ಆಗಮಿಸುವ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಣಿಗೆ ನಡೆದಿರುವ ಬಗ್ಗೆ ಮಾಹಿತಿ ಮೇರೆಗೆ ಅಧಿಕಾರಿಗಳು, ಕೆಐಎಗೆ ಶುಕ್ರವಾರ ಹಾಗೂ ಶನಿವಾರ ಬಂದಿಳಿದ ಪ್ರಯಾಣಿಕರ ಮೇಲೆ ನಿಗಾವಹಿಸಿದ್ದಾಗ ಈ ಐವರ ಮೇಲೆ ಶಂಕೆ ಮೂಡಿತು. ಈ ಅನುಮಾನದ ಮೇರೆಗೆ ಆ ಪ್ರಯಾಣಿಕರನ್ನು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಿದಾಗ ಅವರ ಬಳಿ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.