ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಗ್ರಾಪಂ ನೌಕರ ಹಾಗೂ ಆತನ ಪತ್ನಿಗೆ ಪಟ್ಟಣದ ಜೆಎಂಎಫ್‌ಸಿ 1 ನೇ ಅಪರ ಸಿವಿಲ್ ನ್ಯಾಯಾಲಯ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಗ್ರಾಪಂ ನೌಕರ ಹಾಗೂ ಆತನ ಪತ್ನಿಗೆ ಪಟ್ಟಣದ ಜೆಎಂಎಫ್‌ಸಿ 1 ನೇ ಅಪರ ಸಿವಿಲ್ ನ್ಯಾಯಾಲಯ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಆತಗೂರು ಗ್ರಾಮದ ಗ್ರಾಪಂ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಮೇಶ ಹಾಗೂ ಆತನ ಪತ್ನಿ ಪದ್ಮರೇಖಾಳಿಗೆ 1ನೇ ಅಪರ ಸಿವಿಲ್ ನ್ಯಾಯಾಧೀಶರಾದ ನಳಿನ ದಂಡ ವಿಧಿಸಿದ್ದಾರೆ. ಆರೋಪಿಗಳು ದಂಡ ಪಾವತಿಸಲು ತಪ್ಪಿದ್ದಲ್ಲಿ 9 ತಿಂಗಳು ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ 2016 ರಂದು ಆರೋಪಿಗಳಾದ ರಮೇಶ್ ಮತ್ತು ಪದ್ಮರೇಖಾ ಹಳೇ ದ್ವೇಷದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಚಿಕ್ಕೋನ ಎಂಬುವವರ ಪುತ್ರ ಪ್ರಸನ್ನ ಅವರನ್ನು ಅಡ್ಡಗಟ್ಟಿ ಅವ್ಯಾಚ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿ, ಕೊಲೆ ಬೆದರಿಗೆ ಹಾಕಿದ್ದರು.
ಘಟನೆ ಸಂಬಂಧ ಅಂದಿನ ಕೆಸ್ತೂರು ಪಿಎಸ್ಐ ವನರಾಜು ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 9 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರ ನಡೆಯಿತು.
ಕೆಸ್ತೂರು ಠಾಣೆ ಹೆಂಡ್ ಕಾನ್ಸ್ ಟೇಬಲ್ ಮಹದೇವು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸುವ ಮೂಲಕ ಪ್ರಕರಣ ತ್ವರಿತಗತಿಯಲ್ಲಿ ಇತ್ಯರ್ಥವಾಗಲು ಸಹಕರಿಸಿದ್ದರು.
ಅಂತಿಮವಾಗಿ ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ನಳಿನ ಅವರು ಆರೋಪಿಗಳಿಗೆ ದಂಡ ವಿಧಿಸಿ ತೀರ್ಪು ನೀಡಿದರಲ್ಲದೇ ದಂಡದ ಹಣದಲ್ಲಿ ಗಾಯಾಳುಗಳೀಗೆ ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಪ್ರಾಷಿಕೂಷನ್ ಪರ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ.ಸುರೇಶ್ ವಾದ ಮಂಡಿಸಿದ್ದರು.
