ನೇಣು ಬಿಗಿದುಕೊಂಡು ಬಾರ್ ಕ್ಯಾಷಿಯರ್ ಆತ್ಮಹತ್ಯೆ

| Published : Aug 17 2025, 01:38 AM IST

ಸಾರಾಂಶ

ನನ್ನ ಸಾವಿಗೆ ನಾನೇ ಕಾರಣ. ತಮ್ಮ ಜಮೀನನ್ನು ಸಮಭಾಗ ಮಾಡಿ ಸಹೋದರರಿಗೆ ಹಂಚುವಂತೆ ಡೆತ್ ನೋಟ್ ಬರೆದಿಟ್ಟು ಕಟ್ಟಡ ಮೇಲಂತಸ್ಥಿನ ರೂಂ ಒಂದರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಾರ್ ಅಂಡ್ ರಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಹಾಗೂ ಮ್ಯಾನೇಜರ್ ಆಗಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಮಂಚನಹಳ್ಳಿ ಬಳಿ ನಡೆದಿದೆ.

ಮಂಡ್ಯ ಬಸರಾಳು ಗ್ರಾಮದ ಬೋರೇಗೌಡ (53) ಈತ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ. ಕೆ.ಆರ್.ಪೇಟೆ- ಮೈಸೂರು ಮುಖ್ಯ ರಸ್ತೆಯ ಮಂಚನಹಳ್ಳಿ ಬಳಿ ಇರುವ ಮಾಣಿಕ್ಯ ಬೋರ್ಡಿಂಗ್ ಲಾಡ್ಜಿಂಗ್ ಮತ್ತು ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಹಾಗೂ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು.

ಶನಿವಾರ ಬೆಳಗ್ಗೆ ನನ್ನ ಸಾವಿಗೆ ನಾನೇ ಕಾರಣ. ತಮ್ಮ ಜಮೀನನ್ನು ಸಮಭಾಗ ಮಾಡಿ ಸಹೋದರರಿಗೆ ಹಂಚುವಂತೆ ಡೆತ್ ನೋಟ್ ಬರೆದಿಟ್ಟು ಕಟ್ಟಡ ಮೇಲಂತಸ್ಥಿನ ರೂಂ ಒಂದರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮೃತರ ಪತ್ನಿ ನೀಡಿರುವ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.