ಬೈಕ್ ಡಿಕ್ಕಿ: ಪಾದಾಚಾರಿ ಸಾವು
KannadaprabhaNewsNetwork | Published : Oct 26 2023, 01:00 AM IST
ಬೈಕ್ ಡಿಕ್ಕಿ: ಪಾದಾಚಾರಿ ಸಾವು
ಸಾರಾಂಶ
ಬೈಕ್ ಡಿಕ್ಕಿ: ಪಾದಾಚಾರಿ ಸಾವುಕೆಪಿಟಿಸಿಎಲ್‌ನ ನಿವೃತ್ತ ನೌಕರ ನಾಗೇಗೌಡನದೊಡ್ಡಿಯ ಶಿವಮಲ್ಲಪ್ಪ ಮೃತ
ಮಳವಳ್ಳಿ: ಬೈಕ್ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮದ ಗೇಟ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಕೆಪಿಟಿಸಿಎಲ್‌ನ ನಿವೃತ್ತ ನೌಕರ ನಾಗೇಗೌಡನದೊಡ್ಡಿಯ ಶಿವಮಲ್ಲಪ್ಪ(64) ಸಾವನ್ನಪ್ಪಿದರು. ಬೆಂಗಳೂರಿನಿಂದ ದಸರಾ ಹಬ್ಬಕ್ಕಾಗಿ ಬಂದಿದ್ದ ಶಿವಮಲ್ಲಪ್ಪ ವಾಪಸ್ ಬೆಂಗಳೂರಿಗೆ ತೆರಳಲು ಮಂಗಳವಾರ ಸಂಜೆ ಬಸ್ ಗಾಗಿ ಕಾಯುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.