ಸಾರಾಂಶ
ಹಲಗೂರು: ಟೆಂಪೊ ಡಿಕ್ಕಿಯಾಗಿ ಬೈಕ್ ಸಾವರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿ ನಡೆದಿದೆ. ಡಿ.ಹಲಸಹಳ್ಳಿಯ ಸತೀಶ್ (44) ಮೃತಪಟ್ಟ ದುರ್ದೈವಿ. ಕಾರ್ಯ ನಿಮಿತ್ತವಾಗಿ ಭಾನುವಾರ ರಾತ್ರಿ ಹಲಗೂರಿಗೆ ಬಂದು ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಹಲಗೂರು ಕಡೆಯಿಂದ ಮಳವಳ್ಳಿ ಕಡೆಗೆ ತೆರಳುತ್ತಿದ್ದ ಟೆಂಪೋ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಸೋಮವಾರ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಶವವನ್ನು ಮರಣೊತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ನೀಡಲಾಯಿತು.ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಹನಕೆರೆ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಸುಮಾರು 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು, ಸುಮಾರು 5.6 ಅಡಿ ಎತ್ತರ, ಸಾಧಾರಣ ಶರೀರ, ದುಂಡನೆ ಮುಖ, ಗೋಧಿ ಮೈಬಣ್ಣ, ದಪ್ಪನೆ ಮೂಗು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ಕೂದಲು, ಕಪ್ಪು-ಬಳಿ ಮಿಶ್ರಿತ ಗಡ್ಡ-ಮೀಸೆ ಹೊಂದಿದ್ದಾನೆ. ಸಿಮೆಂಟ್ ಕಪ್ಪು ಮಿಶ್ರಿತ ಕೆಂಪು ಗೆರೆ ಇರುವ ಫುಲ್ ಸ್ವೆಟರ್, ಅರ್ಧ ತೋಳಿನ ಬಿಳಿ ಬಣ್ಣದ ಬನಿಯನ್, ಕೆಂಪು ಉಡುದಾರ, ನೀಲಿ ಬಣ್ಣದ ಚಡ್ಡಿ ಧರಿಸಿದ್ದು, ಈತನ ಬಲಗೈಯಲ್ಲಿ ಕೆಂಪುದಾರ ಮಣಿಗಳು ಇರುತ್ತವೆ. ವಾರಸುದಾರರಿದ್ದಲ್ಲಿ ತಕ್ಷಣ ರೈಲ್ವೆ ಪೊಲೀಸರು ದೂ.ಸಂಖ್ಯೆ 0821-2516579 ಅಥವಾ ಮೊ:9480802122 ಸಂಪರ್ಕಿಸಲು ಕೋರಲಾಗಿದೆ.ಅಪರಿಚಿತ ವ್ಯಕ್ತಿ ಶವ ಪತ್ತೆಪಾಂಡವಪುರ: ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಪಾಂಡವಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ವ್ಯಕ್ತಿಗೆ 35-40 ವರ್ಷವಾಗಿದೆ. 5.10 ಅಡಿ ಎತ್ತರ, ಸಿಮೆಂಟ್ ಕಲರ್ ತುಂಬುತೋಳಿನ ಸ್ವೆಟರ್, ಮಾಸಲು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಬಲಗೈಯಲ್ಲಿ ಸುದೀಪ್, ಮಾದೇಶ್ವರ, ಕುಮಾರ ಹಾಗೂ ಸರ್ಪದ ಹಚ್ಚೆ ಇದೆ. ವಾರಸುದಾರರಿದ್ದಲ್ಲಿ ದೂ. ಸಂ : 0232-224200, 9480804800,08236-255131, 9480804874 ಅನ್ನು ಸಂಪರ್ಕಿಸಲು ಟೌನ್ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.