ನಿಯಂತ್ರಣ ತಪ್ಪಿದ ಬೈಕ್‌ನಿಂದ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ತಿರುವಿನ ಬಳಿ ಜರುಗಿದೆ. ಸಮೀಪದ ವಡ್ಡರಹಳ್ಳಿ ದರ್ಶನ್ (25) ಅಪಘಾತದಲ್ಲಿ ಮೃತಪಟ್ಟ ಯುವಕ.
ಕಿಕ್ಕೇರಿ:
ನಿಯಂತ್ರಣ ತಪ್ಪಿದ ಬೈಕ್‌ನಿಂದ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ಹೋಬಳಿಯ ರಾಮನಹಳ್ಳಿ ತಿರುವಿನ ಬಳಿ ಜರುಗಿದೆ. ಸಮೀಪದ ವಡ್ಡರಹಳ್ಳಿ ದರ್ಶನ್ (25) ಅಪಘಾತದಲ್ಲಿ ಮೃತಪಟ್ಟ ಯುವಕ. ಕಿಕ್ಕೇರಿಗೆ ಕಾರ್ಯ ನಿಮಿತ್ತ ಶನಿವಾರ ರಾತ್ರಿ ತೆರಳಿ ಕೆಲಸ ಮುಗಿಸಿಕೊಂಡು ಸ್ವಗ್ರಾಮ ವಡ್ಡರಹಳ್ಳಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ರಾಮನಹಳ್ಳಿ ತಿರುವಿನ ಬಳಿ ಬೈಕ್ ನಿಯಂತ್ರಣ ತಪ್ಪಿರಸ್ತೆ ಬದಿಯಲ್ಲಿದ್ದ ತಂತಿ ಬೇಲಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದನು. ಇದರಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ದೂರು ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವುಮದ್ದೂರು: ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿ ಸಮೀಪದ ಮದ್ದೂರು-ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಜರುಗಿದೆ.ತಾಲೂಕಿನ ಕಂಪಲಾಪುರ ಗ್ರಾಮದ ಲೇ.ನಿಂಗೇಗೌಡನ ಪುತ್ರ ಬೈರೇಗೌಡ (31) ಮೃತ ಸವಾರ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ. ಬೈರೇಗೌಡ ತನ್ನ ಬೈಕಿನಲ್ಲಿ ತೊರೆಶೆಟ್ಟಿಹಳ್ಳಿ ಹಾಗೂ ಯರಗನಹಳ್ಳಿ ಮಾರ್ಗದ ತುಮಕೂರು- ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ಬಂದ ಟ್ರ್ಯಾಕ್ಟರ್ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.