ಬೆಳಗಾವಿಯಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್‌ ಹಾಕಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ.

ಬೆಳಗಾವಿ: ಇಲ್ಲಿನ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್‌ ಹಾಕಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ.

ನಗರದ ರಾಕೇಶ ನಂದಗಡಕರ ಎನ್ನುವವರು ತಮ್ಮ ಮಾರ್ವೆಲೆಸ್‌ ಬೆಳಗಾಂ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಪಿಲೇಶ್ವರ ದೇವಸ್ಥಾನದ ಉತ್ಸವದ ಕುರಿತು ಸ್ಟೋರಿ(ಸ್ಟೇಟಸ್‌) ಹಾಕಿದ್ದರು. ಇದಕ್ಕೆ ಇಲಾಯಿತ್‌ ಹೆಸರಿನ ಖಾತೆಯಿಂದ ಪ್ರತಿಕ್ರಿಯೆ ಬಂದಿದ್ದು, ‘ಮಾಷಾ ಅಲ್ಲಾ ಇದರ್‌ ಬಾಂಬ್‌ ಫೋಡುಂಗಾ ಏಕ್‌ ದಿನ್’ ಎಂದು ಬೆದರಿಕೆ ಹಾಕಲಾಗಿದೆ. ಈ ಕುರಿತು ಭಾನುವಾರ ಬೆಳಗಾವಿ ಸಿಇಎನ್‌ ಪೊಲೀಸ್‌ ಠಾಣೆಗೆ ರಾಕೇಶ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.