ಸಾರಾಂಶ
ಮಳವಳ್ಳಿ:
ಅಪ್ರಾಪ್ತನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಸೋದರ ಮಾವನಿಗೆ ಪಟ್ಟಣದ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರು 25 ಸಾವಿರ ದಂಡ ಮತ್ತು ಒಂದು ದಿನದ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಿದೆ.ತಾಲೂಕಿನ ಹಂಚೀಪುರ - ದುಗ್ಗನಹಳ್ಳಿ ರಸ್ತೆಯಲ್ಲಿ 2024ರ ಜೂನ್ 1ರಂದು ಅಪ್ರಾಪ್ತನಿಗೆ ಚಾಲನೆ ಮಾಡುತ್ತಿದ್ದ ಬೈಕ್ ಅಪಘಾತಕ್ಕಿಡಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಸಿದ್ದರು. ಈ ಸಂಬಂಧ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ವಿಚಾರಣೆ ನಡೆಸಿ ಅಪ್ರಾಪ್ತನಿಗೆ ಬೈಕ್ ನೀಡಿದ್ದ ಸೋದರ ಮಾವ ಯೋಗೀಶ್ ಎಂಬುವವರಿಗೆ 25 ಸಾವಿರ ಮತ್ತು ಒಂದು ದಿನದ ನ್ಯಾಯಾಂಗ ಬಂಧನ ನೀಡಿ ತೀರ್ಪು ನೀಡಿ ಆದೇಶಿಸಿದ್ದಾರೆ.
ಅನ್ಯಕೋಮಿನ ಯುವಕನೊಂದಿಗೆ ಯುವತಿ ಪರಾರಿ: ತಂದೆಯಿಂದ ದೂರು ದಾಖಲುಪಾಂಡವಪುರ:
ತಾಲೂಕಿನ ಚಿನಕುರಳಿ ಗ್ರಾಮದ ಯುವತಿ ಅನ್ಯ ಕೋಮಿನ ಯುವಕನೊಂದಿಗೆ ಪರಾರಿಯಾಗಿರುವುದಾಗಿ ಅನುಮಾನಿಸಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾಮದ ಲಾರಿ ಚಾಲಕ ಶಿವಣ್ಣರ ಪುತ್ರಿ ಎಸ್.ಸಹನಾ ನಾಪತ್ತೆಯಾಗಿರುವ ಯುವತಿ.ಅದೇ ಗ್ರಾಮದ ಅನ್ಯ ಕೋಮಿನ ಗೌಸ್ ಪಾಷ ಪುತ್ರ ಮುಜಾಸಿಮ್ ಪಾಷ ನನ್ನ ಮಗಳೊಂದಿಗೆ ಪರಾರಿಯಾಗಿರುವುದಾಗಿ ಶಂಕೆ ಇದೆ ಎಂದು ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಿಯುಸಿ ಶಿಕ್ಷಣ ಮುಗಿಸಿ ಪದವಿ ಕಾಲೇಜಿಗೆ ದಾಖಲಾಗಿದ್ದಳು. ಮುಂದಿನ ತಿಂಗಳು ಕಾಲೇಜು ಆರಂಭವಾಗುತ್ತಿತ್ತು. ಆದರೆ, ಜು.14 ರಂದು ಭಾಗ್ಯಲಕ್ಷ್ಮೀ ಬಾಂಡ್ ವಿಚಾರವಾಗಿ ಪಟ್ಟಣದ ಸಿಡಿಪಿಒ ಕಚೇರಿ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮನೆಗೆ ವಾಪಸ್ ಬಂದಿಲ್ಲ. ಆಕೆ ಪತ್ತೆಗಾಗಿ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಬಳಿ ವಿಚಾರಸಲಾಗಿಯೂ ಸುಳಿವು ಪತ್ತೆಯಾಗಿಲ್ಲ.ನನಗೆ ಮುಜಾಸಿಮ್ ಪಾಷ ಎಂಬ ಯುವಕನ ಮೇಲೆ ಅನುಮಾನವಿದೆ. ನನ್ನ ಮಗಳು ಮತ್ತು ಆತನ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಶಾಂತಿ ಕದಡಲು ಸಾಧ್ಯತೆ ಇರುವುದರಿಂದ ಗ್ರಾಮಕ್ಕೆ ಪೊಲೀಸ್ ಬಂದೂಬಸ್ತ್ ಕಲ್ಪಿಸಲಾಗಿದೆ. ಕಾಣೆಯಾದ ಯುವತಿಗೆ 18ವರ್ಷ 3 ತಿಂಗಳು, ಸಾಧಠರಣ ಮೈಕಟ್ಟು, ಕೋಲು ಮುಖ, ಕಾಣೆಯಾದ ದಿನ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ತಿಳಿಸಲಾಗಿದೆ.ಕಸಾಯಿಖಾನೆಗೆ ರಾಸುಗಳ ಸಾಗಾಣೆ: ಹಿಡಿದು ಪೊಲೀಸರ ವಶಕ್ಕೆ
ಶ್ರೀರಂಗಪಟ್ಟಣ:ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ರಾಸುಗಳನ್ನು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.
ಟೆಂಪೊ ಒಂದರಲ್ಲಿ ಅಕ್ರಮವಾಗಿ ಮೂರು ರಾಶುಗಳನ್ನು ತುಂಬಿ ಚುಂಚನಕಟ್ಟೆಯಿಂದ ಮಂಡ್ಯಕ್ಕೆ ಹೆದ್ದಾರಿ ಮೂಲಕ ಸಾಗಿಸುತ್ತಿದ್ದ ಗೋರಕ್ಷಕರ ಖಚಿತ ಮಾಹಿತಿ ಮೇರೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಟೆಂಪೋವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಟ್ಟಣ ಪೊಲೀಸರು ಆಗಮಿಸಿ ಠಾಣೆಗೆ ಕರೆ ತಂದು ರಾಸುಗಳ ರಕ್ಷಸಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ರಾಸುಗಳನ್ನು ಮೈಸೂರಿನ ಗೋವು ರಕ್ಷಣಾ ಕೇಂದ್ರಕ್ಕೆ ಬಿಟ್ಟಿದ್ದಾರೆ. ಹಿಂದು ಜಾಗರಣಾ ವೇದಿಕೆಯ ವಕೀಲ ಬಾಲರಾಜ್, ಸಂಚಾಲಕ ಚಂದನ್, ಸದಸ್ಯರಾದ ರವಿ ಕೆ.ಕೆ, ಚಂದ್ರು ಕಿರಂಗೂರು, ನಗರದ ಯುವ ರೈತ ಸಾಗರ್ ಪುನೀತ್ ಕಾರ್ಯಾಚರಣೆಯಲ್ಲಿದ್ದರು.)
)
;Resize=(128,128))
;Resize=(128,128))
;Resize=(128,128))