ಸಾರಾಂಶ
ಮದ್ದೂರು : ಕಾರು ಮೊಪೆಡ್‌ಗೆ ಹಿಂದಿನಿಂದ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೈಲೂರು ಕೆರೆ ಸಮೀಪ ಭಾನುವಾರ ಸಂಜೆ ಜರುಗಿದೆ.
ತಾಲೂಕಿನ ಬೂದಗುಪ್ಪೆ ಗ್ರಾಮದ ಸಿದ್ದಯ್ಯ (58) ಮೃತ ಪಟ್ಟವರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೊಪೆಡ್‌ನಿಂದ ಕೆಳಗೆ ಬಿದ್ದ ಸಿದ್ದಯ್ಯನ ತಲೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ.
ಸಿದ್ದಯ್ಯ ತನ್ನ ಟಿವಿಎಸ್ ಮೊಪೆಡ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ರುದ್ರಾಕ್ಷಿಪುರ ಕಡೆಯಿಂದ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಕಾರು ತೈಲೂರು ಕೆರೆ ಕ್ರಾಸ್‌ನಲ್ಲಿ ಮೊಪೆಡ್‌ಗೆ ಇಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ನಂತರ ಚಾಲಕ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈಜಲು ಹೋಗಿ ಅಪರಿಚಿತ ವ್ಯಕ್ತಿ ಸಾವು
ಶ್ರೀರಂಗಪಟ್ಟಣ: ಈಜಲು ಹೋಗಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಲಮುರಿ ಪಾಲ್ಸ್ ನಲ್ಲಿ ನಡೆದಿದೆ.ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸುಮಾರು 6 ಅಡಿ ಎತ್ತರವಿರುವ ಮೃತ ವ್ಯಕ್ತಿ ನೀಲಿ ಜೀನ್ಸ್ ಪ್ಯಾಂಟ್, ಕಾಫಿ ಕಲರ್ ಅಂಡರ್ ವೇರ್ ಧರಿಸಿದ್ದಾರೆ. ಬಿಳಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ವ್ಯಕ್ತಿ ಎಡ ಕೈ ಮೇಲೆ ಎಂಎಸ್ ಎಂಬ ಇಂಗ್ಲೀಷ್ ಹಸಿರು ಹಚ್ಚೆ ಇದೆ. ಅಪರಿಚಿತ ವ್ಯಕ್ತಿಯ ವಾರಸುದಾರರು ಕಂಡು ಬಂದಲ್ಲಿ ಮಂಡ್ಯ ಜಿಲ್ಲಾ ಎಸ್ಪಿ ಕಚೇರಿ ಅಥವಾ ಕೆಆರ್‌ಎಸ್ ಪೊಲೀಸ್ ಠಾಣೆ 9480804856 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.