ಸಾರಾಂಶ
ಅಕ್ಕಿಹೆಬ್ಬಾಳು ಗ್ರಾಮದ ಸ್ನೇಹಿತರ ಮನೆಯಿಂದ ಪಟ್ಟಣಕ್ಕೆ ನಾಲ್ವರು ಸ್ನೇಹಿತರು ಕಾರಿನಲ್ಲಿ ಆಗಮಿಸುತ್ತಿದ್ದರು. ಅಕ್ಕಿಹೆಬ್ಬಾಳು ಸೇತುವೆಗೆ ಸಮೀಪದ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿದ ಪರಿಣಾಮ ಪಕ್ಕದ ಹಳ್ಳಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಕುಮಾರ್ ಪುತ್ರ ಸಾಗರ್ ಎಂಬ ಯುವಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾರು ಹಳ್ಳಕ್ಕೆ ಮಗುಚಿ ಬಿದ್ದು ಮೂವರು ಯುವಕರು ಧಾರಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೊಸ ಸೇತುವೆ ಸಮೀಪ ಶನಿವಾರ ರಾತ್ರಿ ನಡೆದಿದೆ.ಪಟ್ಟಣದ ನಿವಾಸಿ ಚೇತನ್‌ಕುಮಾರ್ ಅವರ ಪುತ್ರ ಅನುಚ್ಛೇತ್ (20) ಸೋಮಶೇಖರ್ ಪುತ್ರ ಪವನ್‌ಶೆಟ್ಟಿ (19) ಮತ್ತು ಸರ್ವೆಯರ್ ಅಶೋಕ್ ಕುಮಾರ್ ಪುತ್ರ ಚಿರಂಜೀವಿ (20) ಮೃತ ದುರ್ದೈವಿಗಳು.
ಅಕ್ಕಿಹೆಬ್ಬಾಳು ಗ್ರಾಮದ ಸ್ನೇಹಿತರ ಮನೆಯಿಂದ ಪಟ್ಟಣಕ್ಕೆ ನಾಲ್ವರು ಸ್ನೇಹಿತರು ಕಾರಿನಲ್ಲಿ ಆಗಮಿಸುತ್ತಿದ್ದರು. ಅಕ್ಕಿಹೆಬ್ಬಾಳು ಸೇತುವೆಗೆ ಸಮೀಪದ ತಿರುವಿನಲ್ಲಿ ವಾಹನ ನಿಯಂತ್ರಣ ತಪ್ಪಿದ ಪರಿಣಾಮ ಪಕ್ಕದ ಹಳ್ಳಕ್ಕೆ ಮಗುಚಿ ಬಿದ್ದಿದೆ.ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಕುಮಾರ್ ಪುತ್ರ ಸಾಗರ್ ಎಂಬ ಯುವಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಆನಂದ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಡರಾತ್ರಿ ನಡೆದ ಈ ಅಪಘಾತವನ್ನು ನೋಡಿದ ದಾರಿಹೋಕರು ಗಮನಿಸಿ ಸಂಬಂಧಿಸಿದವರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಯುವಕರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಾಲನೆ: ಕೇಸುಮದ್ದೂರು: ತಾಲೂಕಿನ ನಿಡಘಟ್ಟ ಸಮೀಪದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಕಾರುಗಳ ಚಾಲಕರ ವಿರುದ್ಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಸ್ವಯಂ ಮೊಕದ್ದಮ್ಮೆ ದಾಖಲು ಮಾಡಿಕೊಂಡಿದ್ದಾರೆ.
ತಮಿಳುನಾಡು ಮೂಲದ ಟಿ.ಎನ್.5, ಬಿ.ಡಿ. 3980 ಹಾಗೂ ಕೆಎ 3 ಎಂ.ಪಿ.14 93 ಕಾರುಗಳ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಕಾರುಗಳು ವಿರುದ್ಧ ದಿಕ್ಕಿನಿಂದ ಬರುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಟ್ವಿಟರ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಚಾರಿ ಠಾಣೆ ಪೊಲೀಸರು ಕಾರುಗಳ ಚಾಲಕರ ವಿರುದ್ಧ ಸ್ವಯಂ ಪ್ರಕರಣ ದಾಖಲೆ ಮಾಡಿಕೊಂಡು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದಾರೆ.