ಖ್ಯಾತ ಪಾಪ್‌ ಗಾಯಕಿ ಟೇಲರ್‌ ಸ್ವಿಫ್ಟ್ ಸಂಗೀತ ಕಾರ್ಯಕ್ರಮದ ವೇಳೆ ಭಾರೀ ಸ್ಫೋಟಕ್ಕೆ ಐಸಿಸ್‌ ಸಂಘಟನೆ ಸಂಚು

| Published : Aug 09 2024, 12:35 AM IST / Updated: Aug 09 2024, 04:40 AM IST

Taylor Swift
ಖ್ಯಾತ ಪಾಪ್‌ ಗಾಯಕಿ ಟೇಲರ್‌ ಸ್ವಿಫ್ಟ್ ಸಂಗೀತ ಕಾರ್ಯಕ್ರಮದ ವೇಳೆ ಭಾರೀ ಸ್ಫೋಟಕ್ಕೆ ಐಸಿಸ್‌ ಸಂಘಟನೆ ಸಂಚು
Share this Article
  • FB
  • TW
  • Linkdin
  • Email

ಸಾರಾಂಶ

ಖ್ಯಾತ ಪಾಪ್‌ ಗಾಯಕಿ ಟೇಲರ್‌ ಸ್ವಿಫ್ಟ್ ಆಸ್ಟ್ರೀಯಾದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ ವೇಳೆ ಐಸಿಸ್‌ ಉಗ್ರ ಸಂಘಟನೆ ಭಾರೀ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ವಿಯೆನ್ನಾ: ಖ್ಯಾತ ಪಾಪ್‌ ಗಾಯಕಿ ಟೇಲರ್‌ ಸ್ವಿಫ್ಟ್ ಆಸ್ಟ್ರೀಯಾದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ ವೇಳೆ ಐಸಿಸ್‌ ಉಗ್ರ ಸಂಘಟನೆ ಭಾರೀ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಸಂಚಿನ ಸಂಬಂಧ ಇಬ್ಬರ ಬಂಧನದೊಂದಿಗೆ ಭಾರೀ ಅನಾಹುತವೊಂದು ತಪ್ಪಿದೆ.

ಗುರುವಾರ, ಶುಕ್ರವಾರ ಮತ್ತು ಶನಿವಾರ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ತಲಾ 2 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಘೋರ ದುರಂತವೊಂದು ತಪ್ಪಿದಂತಾಗಿದೆ. ಸಂಚು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಕಾರ್ಯಕ್ರಮ ನಿಗದಿಯಾಗಿದ್ದ ಸ್ಟೇಡಿಯಂನಲ್ಲಿ ಶಂಕಿತ ಯುವಕನ ಬಂಧಿಸಿದ ವಿಚಾರಣೆ ನಡೆಸಿದ ವೇಳೆ ದುಷ್ಕೃತ ಬೆಳಕಿಗೆ ಬಂದಿದೆ. ಆತ ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತರ ಮನೆಯಲ್ಲಿ ಸ್ಫೋಟಕ ಬಳಸುವ ರಸಾಯನಿಕ ಸೇರಿದಂತೆ ದಾಳಿಗೆ ಅಗತ್ಯವಾದ ವಸ್ತುಗಳು ಸಿಕ್ಕಿವೆ. ಬಂಧಿತರಿಬ್ಬರೂ ಕೆಲ ತಿಂಗಳ ಹಿಂದೆ ಜಾಲತಾಣದ ಮೂಲಕ ಐಸಿಸ್‌ ಸಂಪರ್ಕಕ್ಕೆ ಬಂದು, ಸ್ಫೋಟಕ್ಕೆ ಮುಂದಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.

‘ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಚಾಕು ಹಾಗೂ ಅವರೇ ತಯಾರಿಸಿದ ಸ್ಫೋಟಕಗಳನ್ನು ಬಳಸಿ ಸಾಧ್ಯವಾದಷ್ಟು ಜನರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.