ಬ್ಲೇಡ್ ನಿಂದ ಹಲ್ಲೆ: ಆರೋಪಿ ಪೊಲೀಸ್‌ ವಶಕ್ಕೆ

| Published : Nov 12 2023, 01:00 AM IST

ಸಾರಾಂಶ

ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಪಿಎಚ್ ಕಾಲೋನಿಯ ಆಜಾದ್ ಪಾರ್ಕ್ ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಪಿಎಚ್ ಕಾಲೋನಿಯ ಆಜಾದ್ ಪಾರ್ಕ್ ನಲ್ಲಿ ನಡೆದಿದೆ.ಮಹಮದ್ ರಫೀಕ್ ಎಂಬಾತ ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ವೇಳೆ ಆರೋಪಿ ಸಾಜಿದ್ ಹಾಗೂ ಸ್ನೇಹಿತರು ಏಕಾಏಕಿ ದಾಳಿ ನಡೆಸಿ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.