ಚಿನ್ನದಂಗಡಿ ದರೋಡೆಗೆ ವಿಫಲ ಯತ್ನ: ಒರ್ವ ಕಳ್ಳನ ಸೆರೆ
KannadaprabhaNewsNetwork | Published : Oct 18 2023, 01:00 AM IST
ಚಿನ್ನದಂಗಡಿ ದರೋಡೆಗೆ ವಿಫಲ ಯತ್ನ: ಒರ್ವ ಕಳ್ಳನ ಸೆರೆ
ಸಾರಾಂಶ
ಕೆ.ಜಿ. ಟೆಂಪಲ್ ನಲ್ಲಿ ಲಕ್ಷ್ಮಿ ಜ್ಯುವೆಲರ್ ಗೆ ತಡರಾತ್ರಿ ಕಳ್ಳರು ಕನ್ನಹಾಕಿ ದೋಚುವ ವಿಫಲಯತ್ನ ನಡೆಸಿ ಓರ್ವ ಸಿಕ್ಕಿಬಿದ್ದಿದ್ದಾನೆ.
ಗುಬ್ಬಿ: ಕೆ.ಜಿ. ಟೆಂಪಲ್ ನಲ್ಲಿ ಲಕ್ಷ್ಮಿ ಜ್ಯುವೆಲರ್ ಗೆ ತಡರಾತ್ರಿ ಕಳ್ಳರು ಕನ್ನಹಾಕಿ ದೋಚುವ ವಿಫಲಯತ್ನ ನಡೆಸಿ ಓರ್ವ ಸಿಕ್ಕಿಬಿದ್ದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಕಳ್ಳತನ ಮಾಸುವ ಮುನ್ನವೇ ಮತ್ತೊಮ್ಮೆ ಕಳ್ಳತನಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಚಿನ್ನದ ಅಂಗಡಿಯ ಗೋಡೆ ಒಡೆಯಲು ವಿಫಲಯತ್ನ ನಡೆಸಿ ನಂತರ ಗ್ಯಾಸ್ ಕಟರ್ ನಿಂದ ಬೀಗ ಮುರಿದು ಒಳನುಗ್ಗುವ ಸಂದರ್ಭದಲ್ಲಿ ಅಂಗಡಿಯಲ್ಲಿ ಅಳವಡಿಸಿದ್ದ ಸೆನ್ಸಾರ್ ಶಬ್ಧದಿಂದ ಎಚ್ಚೆತ್ತ ಮಾಲೀಕರು ಹಾಗೂ ಸಾರ್ವಜನಿಕರು ಅಂಗಡಿಯ ಬಳಿ ಬಂದದ್ದನ್ನು ಕಂಡ ಕಳ್ಳರು ಬುಲೆರೋ ವಾಹನದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಬೆನ್ನಟ್ಟಿ ವಾಹನ ಅಡ್ಡಗಟ್ಟಿ ಓರ್ವ ಕಳ್ಳನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ತಪ್ಪಿಸಿಕೊಂಡು ಹೋಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡಸಿ ಇನ್ನುಳಿದ ಕಳ್ಳರ ಶೋಧನೆಗೆ ಬಲೆ ಬೀಸಿದ್ದಾರೆ. ಚಿನ್ನದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ವ್ಯಾಪಾರಿಗಳಲ್ಲಿ ಆತಂಕ ಉಂಟುಮಾಡಿದೆ. ಫೋಟೊ.... 17 ಜಿ ಯು ಬಿ 2 ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ನಲ್ಲಿ ಸ್ಥಳೀಯರು ಅಂಗಡಿಯ ಮುಂಭಾಗ ಜಮಾಯಿಸಿ ಕಳ್ಳರ ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 17 ಜಿ ಯು ಬಿ 3 ಚಿನ್ನದ ಅಂಗಡಿಯ ಗೋಡೆ ಒಡೆಯಲು ವಿಫಲಯತ್ನ ನಡೆಸಿ ನಂತರ ಗ್ಯಾಸ್ ಕಟರ್ ನಿಂದ ಬೀಗ ಮುರಿದಿದ್ದ ಕಳ್ಳರು.