ಸಾರಾಂಶ
ಸಾಕು ನಾಯಿ ಅನಾರೋಗ್ಯದಿಂದ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಗ್ಗಡದೇವನಪುರದಲ್ಲಿ ನಡೆದಿದೆ.
ಪೀಣ್ಯ ದಾಸರಹಳ್ಳಿ: ಸಾಕು ನಾಯಿ ಅನಾರೋಗ್ಯದಿಂದ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಗ್ಗಡದೇವನಪುರದಲ್ಲಿ ನಡೆದಿದೆ.
ಹೆಗ್ಗಡದೇವನಪುರ ನಿವಾಸಿ ರಾಜಶೇಖರ್ (33) ಮೃತ. ರಾಜಶೇಖರ್ ಅವರು 9 ವರ್ಷದಿಂದ ಸಾಕಿದ್ದ ‘ಬೌನ್ಸಿ’ ಎಂಬ ಹೆಸರಿನ ಜರ್ಮನ್ ಶಫರ್ಡ್ ತಳಿಯ ಸಾಕುನಾಯಿ ಮಂಗಳವಾರ ಮೃತಪಟ್ಟಿತ್ತು.
ತಮ್ಮ ಜಮೀನಿನಲ್ಲಿ ನಾಯಿತ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.