ಬೆಂಗಳೂರು : ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ - 5 ದಿನದಲ್ಲಿ 122 ಕೇಸ್‌

| Published : Dec 03 2024, 01:01 AM IST / Updated: Dec 03 2024, 06:17 AM IST

ಬೆಂಗಳೂರು : ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ - 5 ದಿನದಲ್ಲಿ 122 ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೂರ್ವ ವಿಭಾದ ಪೊಲೀಸರು ಕಳೆದ 5 ದಿನಗಳಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಸವಾರರು, ಚಾಲಕರ ವಿರುದ್ಧ 122 ಪ್ರಕರಣ ದಾಖಲಿಸಿದ್ದಾರೆ.

 ಬೆಂಗಳೂರು : ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೂರ್ವ ವಿಭಾದ ಪೊಲೀಸರು ಕಳೆದ 5 ದಿನಗಳಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಸವಾರರು, ಚಾಲಕರ ವಿರುದ್ಧ 122 ಪ್ರಕರಣ ದಾಖಲಿಸಿದ್ದಾರೆ.

ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿಲ್ಲಿ ಸಂಚಾರ ಪೂರ್ವ ವಿಭಾಗದ ಪೊಲೀಸರು ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ನ.28ರಿಂದ ಡಿ.1ರವರೆಗೆ ವಿವಿಧ ಮಾದರಿಯ 9,068 ವಾಹನಗಳ ತಪಾಸಣೆ ಮಾಡಿರುವ ಸಂಚಾರ ಪೊಲೀಸರು 122 ಪ್ರಕರಣ ದಾಖಲಿಸಿದ್ದಾರೆ.

ಜತೆಗೆ ಪಾನಮತ್ತ ಚಾಲಕರು, ಸವಾರರ ಚಾಲನಾ ಪರವಾನಗಿ(ಡಿಎಲ್‌) ಜಪ್ತಿ ಮಾಡಿದ್ದು, ಅಮಾನತುಗೊಳಿಸಲು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.