ಖೊಟ್ಟಿ ಅಂಕಪಟ್ಟ: ತನಿಖೆಗೆ ಆಗ್ರಹ

| Published : Nov 17 2023, 06:45 PM IST

ಸಾರಾಂಶ

ಅಂಗನವಾಡಿ ಕೇಂದ್ರಗಳಲ್ಲಿ ನೌಕರಿ ಪಡೆಯುತ್ತಿದ್ದು, ಇದರ ಹಿಂದೆ ದೊಡ್ಡ ಜಾಲ ಇದೆ. ಅದನ್ನು ತನಿಖೆಗೆ ಒಳಪಡಿಸಬೇಕು.

ಕನ್ನಡಪ್ರಭ ವಾರ್ತೆ ಇಂಡಿ

ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುವವರಿಗೆ ಪದನ್ನೋತಿ ಮೂಲಕ ಕಾರ್ಯಕರ್ತೆ ಹುದ್ದೆ ಅರ್ಜಿ ಆಹ್ವಾನಿಸಿದಾಗ ಖೊಟ್ಟಿ ಅಂಕಪಟ್ಟಿಗಳನ್ನು ಸಲ್ಲಿಸಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಅಂಕಪಟ್ಟಿಗಳನ್ನು ತನಿಖೆಗೆ ಒಳಪಡಿಸಬೇಕು. ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಖೊಟ್ಟಿ ದಾಖಲೆ ಸಾಬೀತಾದರೆ ಅಂತವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ದಲಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಧರ್ಮರಾಜ ಸಾಲೋಟಗಿ, ಖೊಟ್ಟಿ ದಾಖಲೆಗಳು ಸಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿ ನೌಕರಿ ಪಡೆಯುತ್ತಿದ್ದು, ಇದರ ಹಿಂದೆ ದೊಡ್ಡ ಜಾಲ ಇದೆ. ಅದನ್ನು ತನಿಖೆಗೆ ಒಳಪಡಿಸಬೇಕು. ಅರ್ಜಿ ಸಲ್ಲಿಸುವಾಗ ಲಗತ್ತಿಸಿದ ಅಂಕಪಟ್ಟಿಗಳನ್ನು ತನಿಖೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್‌ ಮಾಡದೇ ತತ್ಸಮಾನ ವಿದ್ಯಾರ್ಹತೆ ಎಂದು ಯಾವುದೋ ಒಂದು ಶಾಲೆಯಿಂದ ಮುಕ್ತ ವಿಶ್ವವಿದ್ಯಾಲಯ ಎಂದು ಅಂಕಪಟ್ಟಿ ತಂದು ಲಗತ್ತಿಸಿದ್ದಾರೆ. ಅದನ್ನು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು

ಈ ವೇಳೆ ಸುನೀಲ ಅಗರಖೇಡ, ಕಿರಣ ತೇಲಗ, ಪ್ರಶಾಂತ ಸಿಂಗೆ, ರಮೇಶ ಹಜೆನವರ, ರಾಮು ಹಿಳ್ಳಿ, ಸುದೀಪ ನಾವಿ, ರಾಜು ಶಿರಗೂರ, ಶ್ರೀಕಾಂತ ಧರೆನವರ, ರೋಹಿತ ಹೊಸಮನಿ, ಸಚೀನ ಕೋಟೆ, ಸೋಮನಿಂಗ ಸಾಲೋಟಗಿ, ತಿಪ್ಪಣ್ಣ ಹಿಳ್ಳಿ, ಶೇಖರ ಹಿಳ್ಳಿ, ಗಂಗಾಧರ ಹಜೇರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.