ಸಾರಾಂಶ
ಮೈಸೂರು : 6 ತಿಂಗಳಿಂದ ಸಂಬಳ ನೀಡದ ಹಿನ್ನೆಲೆ ಮನನೊಂದ ಹೊರ ಗುತ್ತಿಗೆ ನೌಕರ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿರುವ ಘಟನೆ ಮೈಸೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನಡೆದಿದೆ.
ಹೊರಗುತ್ತಿಗೆ ನೌಕರ ದೀಪಕ್ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ 6 ತಿಂಗಳಿಂದ ಸಂಬಳ ನೀಡದ ಕಾರಣ ಬೇಸರಗೊಂಡಿದ್ದ ದೀಪಕ್, ಕೆಲಸಕ್ಕೆ ಬಂದ ವೇಳೆ ಸಹಾಯಕ ನಿರ್ದೇಶಕರನ್ನು ಪ್ರಶ್ನೆ ಮಾಡಿದ್ದಾರೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕಚೇರಿಯಲ್ಲೇ ಟವೆಲ್ ನಿಂದ ಫ್ಯಾನ್ ಗೆ ಬಿಗಿದುಕೊಳ್ಳಲು ಮುಂದಾದಾಗ ಸಹ ಸಿಬ್ಬಂದಿ ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ಇದೇ ವಿಚಾರಕ್ಕೆ ನಾಲ್ಕು ತಿಂಗಳ ಹಿಂದೆ ಸಹ ದೀಪಕ್ ಕೈ ಕುಯ್ದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಆತ ಹೊರ ಗುತ್ತಿಗೆ ನೌಕರ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ಮನೆಯ ಸಮಸ್ಯೆಯಿಂದ ಈ ರೀತಿ ಮಾಡಿಕೊಂಡಿದ್ದಾನೆ. ನಮ್ಮಲ್ಲಿ ಒಟ್ಟು 16 ಜನ ಹೊರ ಗುತ್ತಿಗೆ ನೌಕರರಿದ್ದಾರೆ. ಎಲ್ಲರಿಗೂ ಏಜೆನ್ಸಿ ಮೂಲಕವೇ ಸಂಬಳ ಆಗುತ್ತದೆ. ಆದರೆ, ಈ ಘಟನೆಗೂ ನಮಗೂ ಸಂಬಂಧ ಇಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.