ಸಾರಾಂಶ
ರಜೌರಿ/ ಶ್ರೀನಗರ: ಜಮ್ಮುಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೇನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆಗೈಯಲಾಗಿದೆ
18 ಗಂಟೆ ನಡೆದ ಕಾರ್ಯಾಚರಣೆ
ರಜೌರಿ/ ಶ್ರೀನಗರ: ಜಮ್ಮುಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೇನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆಗೈಯಲಾಗಿದೆಕುಲ್ಗಾಂ ಜಿಲ್ಲೆಯ ನೇಹಮಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಪಡೆಗಳು, ಗುರುವಾರವೇ ಇಡೀ ಪ್ರದೇಶವನ್ನು ಸುತ್ತುವರೆದಿದ್ದವು. ಬಳಿಕ ಸತತ 18 ತಾಸು ನಡೆದ ಕಾರ್ಯಾಚರಣೆಯಲ್ಲಿ 5 ಉಗ್ರರನ್ನು ಹತ್ಯೆಗೈಯಲಾಗಿದೆ. ಮೃತ ಉಗ್ರರ ಶವಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಲಾಯಿತು ಎಂದು ಐಜಿಪಿ (ಕಾಶ್ಮೀರ ವಲಯ) ವಿ.ಕೆ. ಬಿರ್ದಿ ಹೇಳಿದ್ದಾರೆ.
ಮೃತ ಉಗ್ರರನ್ನು ಸಮೀರ್ ಅಹ್ಮದ್ ಶೇಕ್, ಯಾಸಿರ್ ಬಿಲಾಲ್ ಭಟ್, ದಾನಿಶ್ ಅಹ್ಮದ್ ಥೋಕರ್, ಹನ್ಜುಲ್ಲಾ ಯಾಕೂಬ್ ಶಾ ಮತ್ತು ಉಬೈದ್ ಅಹ್ಮದ್ ಪದಾರ್ ಎಂದು ಗುರುತಿಸಲಾಗಿದೆ.ರಜೌರಿಯಲ್ಲೂ ಓರ್ವ ಉಗ್ರ ಬಲಿ:
ಶುಕ್ರವಾರ ರಜೌರಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಬಳಿಕ ಆತನಿಂದ ಎಕೆ-47 ರೈಫಲ್, 3 ಮ್ಯಾಗಜಿನ್, 3 ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.