ಸಾರಾಂಶ
ಸಾಲಕ್ಕೆ ಹೆದರಿ ಒಂದೇ ಕುಟುಂಬದ ಮೂವರು ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ಬಳಿ ಸೋಮವಾರ ನಡೆದಿದೆ.
ಮಂಡ್ಯ : ಸಾಲಕ್ಕೆ ಹೆದರಿ ಒಂದೇ ಕುಟುಂಬದ ಮೂವರು ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಯಲಿಯೂರು ಗ್ರಾಮದ ಬಳಿ ಸೋಮವಾರ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾದ ಮಾಸ್ತಪ್ಪ (65), ಈತನ ಪತ್ನಿ ರತ್ನಮ್ಮ (45 ಹಾಗೂ ಪುತ್ರಿ ಲಕ್ಷ್ಮೀ (18) ಅವರೇ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಮಾಸ್ತಪ್ಪ ಅವರು 12 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಆಟೋ ಚಾಲನೆ ಮಾಡಿ ಜೀವನ ನಡೆಸುತ್ತಿದ್ದರು. ಸಾಲ ತೀರಿಸಲಾಗಿದೆ ಮನನೊಂದಿದ್ದರು. ಇದರಿಂದ ಬೇಸತ್ತಿದ್ದ ಮಾಸ್ತಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರೆನ್ನಲಾಗಿದೆ.
ಸೋಮವಾರ ಗಂಜಾಂನಿಂದ ಆಟೋದಲ್ಲಿ ಬರುವ ಮುನ್ನ ಮೂವರೂ ವಿಷ ಸೇವಿಸಿದ್ದರು. ನಂತರ ಆಟೋದಲ್ಲಿ ಬಂದು ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ನುರಿತ ಈಜುಪಟುಗಳ ಜೊತೆ ಸ್ಥಳಕ್ಕಾಗಮಿಸಿದ ಪೊಲೀಸರು, ಮಾಸ್ತಪ್ಪ ಮತ್ತು ರತ್ನಮ್ಮ ಅವರ ಶವ ಹೊರ ತೆಗೆದಿದ್ದಾರೆ. ನಂತರ ಪುತ್ರಿ ಲಕ್ಷ್ಮೀ ಅವರು ಮೃತ ದೇಹಕ್ಕಾಗಿ ಶೋಧ ನಡೆಸಿದ್ದಾರೆ.
ಮೃತನ ಸಹೋದರ ಶಂಕರ್ ಹೇಳುವ ಪ್ರಕಾರ ಮಾಸ್ತಪ್ಪನವರಿಗೆ 12 ಲಕ್ಷ ರು. ಸಾಲದ್ದು, ಜಮೀನು ಇನ್ನೂ ನಮ್ಮ ತಂದೆಯವರ ಹೆಸರಿನಿಂದ ನಮ್ಮಗಳ ಹೆಸರಿಗೆ ಆಗಿರಲಿಲ್ಲ. ಹೀಗಾಗಿ ಜಮೀನು ಮಾರಾಟ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ.