ಮಳವಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮಾರ್ಗಮಧ್ಯೆ ಗುರುವಾರ ಬೆಳಗ್ಗೆ ಚಲಿಸುತ್ತಿದ್ದ ಬೈಕ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಆಶ್ಚರ್ಯಕರ ರೀತಿಯಲ್ಲಿ ಬೈಕ್ ನಲ್ಲಿದ್ದ ಯುವಕ-ಯುವತಿ ಪಾರಾಗಿದ್ದಾರೆ.

ಮಳವಳ್ಳಿ:

ಪಟ್ಟಣದ ತಾಲೂಕು ಕ್ರೀಡಾಂಗಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮಾರ್ಗಮಧ್ಯೆ ಗುರುವಾರ ಬೆಳಗ್ಗೆ ಚಲಿಸುತ್ತಿದ್ದ ಬೈಕ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಆಶ್ಚರ್ಯಕರ ರೀತಿಯಲ್ಲಿ ಬೈಕ್ ನಲ್ಲಿದ್ದ ಯುವಕ-ಯುವತಿ ಪಾರಾಗಿದ್ದಾರೆ.

ತಾಲೂಕಿನ ಹಾಡ್ಲಿ ಸರ್ಕಲ್‌ನ ಸುದೀಪ್ ತಮ್ಮ ಪಲ್ಸರ್‌ ಬೈಕ್ ನಲ್ಲಿ ಯುವತಿಯ ಜೊತೆ ಹಾಡ್ಲಿ ಸರ್ಕಲ್‌ನಿಂದ ಮಳವಳ್ಳಿಗೆ ಬರುತ್ತಿದ್ದ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ತಾಲೂಕು ಕ್ರೀಡಾಂಗಣ ಮಾರ್ಗದ ಬಳಿ ಏಕಾಏಕಿ ಬೈಕ್‌ನ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಕೂಡಲೇ ಹೊಗೆ ಗಮನಿಸಿದ ಬೈಕ್ ಸವಾರ ಸುದೀಪ್ ಬೈಕ್ ನನ್ನು ನಿಲ್ಲಿಸಿ ಯುವತಿಯೊಂದಿಗೆ ದೂರ ಸರಿದು ಪಾರಾಗಿದ್ದಾರೆ. ಬೈಕ್ ಗೆ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಬೆಂಕಿಯನ್ನು ಗಮನಿಸಿದ ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದರು.

ಈ ಸಂಬಂಧ ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಬೈಕ್ ಡಿಕ್ಕಿ: ಸವಾರ ಸಾವು

ಮಳವಳ್ಳಿ: ರಸ್ತೆ ಬದಿ ಕೆಟ್ಟು ನಿಂತಿದ್ದ ಗೂಡ್ಸ್‌ ವಾಹನಕ್ಕೆ ಹಿಂಬದಿಯಿಂದ ಬೈಕ್‌ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ನಾಗೇಗೌಡನದೊಡ್ಡಿಯ ಬಳಿಯ ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಬುಧವಾರ ರಾತ್ರಿ ನಡೆದಿದೆ.

ಸರಗೂರು ಗ್ರಾಮದ ವೀರಭದ್ರಸ್ವಾಮಿ ಪುತ್ರ ವಿನೋದ್(26)‌ ಮೃತಟಪಟ್ಟವರು.

ಬುಧವಾರ ರಾತ್ರಿ ಸ್ವಗ್ರಾಮದ ಸರಗೂರಿನಿಂದ ಮಳವಳ್ಳಿಗೆ ತಮ್ಮ ಬೈಕ್‌ ನಲ್ಲಿ ತೆರಳುತ್ತಿದ್ದ ವಿನೋದ್‌ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಎಳನೀರು ತುಂಬಿದ್ದ ಗೂಡ್ಸ್‌ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಬೈಕ್‌ ಸವಾರ ವಿನೋದ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡ್ಸ್ ಟೆಂಪೋ ಪಲ್ಟಿ ಇಬ್ಬರು ಕೂಲಿ ಕಾರ್ಮಿಕರು ಸಾವು

ಮಳವಳ್ಳಿ:ಅಕ್ಕಿಮಿಲ್‌ನ ಗೂಡ್ಸ್‌ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆಯಲ್ಲಿ ಬುಧವಾರ ನಡೆದಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಮಹಮದ್‌ ಆಲಿ ಪುತ್ರ ಸಾನಿಯಾಮತ್‌ (24) ಮತ್ತು ಮಹಮದ್‌ ರಫೀಕ್‌ ಪುತ್ರ ಮಹಮದ್‌ ತೌಸೀಫ್ (25)‌ ಮೃತಪಟ್ಟ ಕಾರ್ಮಿಕರು.ಎಂದಿನಂತೆ ಬನ್ನೂರಿನ ರೈಸ್‌ ಮಿಲ್‌ ವೊಂದಕ್ಕೆ ಅಕ್ಕಿ ಮಿಲ್‌ ಸಾಗಿಸಲು ಗೂಡ್ಸ್‌ ಟೆಂಪೋದಲ್ಲಿ ಗುರುವಾರ ಬೆಳಗ್ಗೆ ಮೂವರು ಕಾರ್ಮಿಕರೊಂದಿಗೆ ಕಿರುಗಾವಲು ಗ್ರಾಮದ ಅಕ್ಕಿಮಿಲ್‌ ಅಕ್ಕಿಯನ್ನು ತುಂಬಿಕೊಂಡು ಬರಲು ಹೋಗಿದ್ದಾಗ ಕಿರುಗಾವಲು ಬಳಿಯ ಕೊದೇನಕೊಪ್ಪಲು-ಮಾರ್ಕಾಲು ರಸ್ತೆ ಬಳಿ ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾನಿಯಾಮತ್‌ ಮತ್ತು ಮಹಮದ್‌ ತೌಸೀಫ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.ಚಾಲಕ ಮತ್ತು ಟೆಂಪೋದಲ್ಲಿದ್ದ ಮತ್ತೊಬ್ಬ ಕೂಲಿ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಎಸ್.ಬಿ.ಯಶವಂತ ಕುಮಾರ್‌, ಸಿಪಿಐ ಬಿ.ಎಸ್.‌ಶ್ರೀಧರ್‌, ಪಿಎಸ್‌ಐ ಡಿ.ರವಿಕುಮಾರ್‌ ಭೇಟಿ ನೀಡಿ ಪರಶೀಲನೆ ನಡೆಸಿದರು. ಈ ಸಂಬಂಧ ಕಿರುಗಾವಲು ಪೊಲೀಸ್‌ ಠಾಣೆಯಲ್ಲಿ ಚಾಲಕ ಮತ್ತು ರೈಸ್‌ ಮಿಲ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.