ಸಾರಾಂಶ
ಖಾಸಗಿ ಸಂಸ್ಥೆಯಿಂದ ಸಾಲ ಕಟ್ಟಲು ಒತ್ತಾಯ- ರೈತ ಮಹಿಳೆ ಆತ್ಮಹತ್ಯೆಮೈಸೂರು
ರೈತ ಮಹಿಳೆ ಆತ್ಮಹತ್ಯೆ
ಫೋಟೋ- 15ಎಂವೈಎಸ್ 60-------
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ದಿ. ಪುಟ್ಟೇಗೌಡ ಎಂಬವರ ಪತ್ನಿ ಕಮಲಮ್ಮ (58) ಆತ್ಮಹತ್ಯೆ ಮಾಡಿಕೊಂಡವರು.
ಕಮಲಮ್ಮ ತಮ್ಮ ಹೆಸರಿನಲ್ಲಿ ಇರುವ ಮೂರು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಹಾಗೂ ಬೆಳೆ ಬೆಳೆಯಲು ರಾಷ್ಟ್ರೀ ಕೃತ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಕೈಸಾಲ ಸೇರಿದಂತೆ ಒಟ್ಟು ಇಪ್ಪತ್ತು ಲಕ್ಷ ರು. ಸಾಲ ಮಾಡಿದ್ದರು ಎನ್ನಲಾಗಿದೆ. ಬುಧವಾರ ಖಾಸಗಿ ಸಂಸ್ಥೆಯವರು ಗ್ರಾಮದ ದೇವಸ್ಥಾನದ ಬಳಿ ಸಾಲ ಕಟ್ಟವಂತೆ ಕೇಳಿದ್ದಾರೆ, ಹಣ ತರುವುದಾಗಿ ಮನೆಗೆ ಹೋದ ಮೃತ ಮಹಿಳೆ ಎಷ್ಟೇ ಹೊತ್ತಾದರೂ ಬರದ ಇದ್ದ ಕಾರಣ ಮೊಮ್ಮಗಳು ಮನೆಗೆ ಹೋಗಿ ನೋಡಿದಾಗ ಆಕೆ ಹಗ್ಗದಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ. ನಂತರ ಮೊಮ್ಮಗಳು ಗ್ರಾಮಸ್ಥರಿಗೆ ವಿಚಾರ ತಿಳಿಸಿದರು. ಗ್ರಾಮಸ್ಥರು ಅಂತರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.