ಆಗ್ರಾ ಹೋಮ್‌ಸ್ಟೇ ಕೆಲಸಗಾರ್ತಿಮೇಲೆ ಸಿಬ್ಬಂದಿ ಗ್ಯಾಂಗ್‌ರೇಪ್‌:ಓರ್ವ ಮಹಿಳೆ ಸೇರಿ ಐವರ ಬಂಧನ

| Published : Nov 14 2023, 01:15 AM IST

ಆಗ್ರಾ ಹೋಮ್‌ಸ್ಟೇ ಕೆಲಸಗಾರ್ತಿಮೇಲೆ ಸಿಬ್ಬಂದಿ ಗ್ಯಾಂಗ್‌ರೇಪ್‌:ಓರ್ವ ಮಹಿಳೆ ಸೇರಿ ಐವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಆಕೆಯ ಸಹೋದ್ಯೋಗಿ ಸಿಬ್ಬಂದಿಗಳೇ ಗಾಜಿನಿಂದ ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಆಗ್ರಾದಲ್ಲಿ ನಡೆದಿದ್ದು, ಸಂತ್ರಸ್ತೆ ನೆರವಿಗಾಗಿ ಚೀರಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಸಂತ್ರಸ್ತೆ ಚೀರಾಡುತ್ತಿರುವ ವಿಡಿಯೋ ವೈರಲ್‌

ಆಗ್ರಾ: ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಆಕೆಯ ಸಹೋದ್ಯೋಗಿ ಸಿಬ್ಬಂದಿಗಳೇ ಗಾಜಿನಿಂದ ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಆಗ್ರಾದಲ್ಲಿ ನಡೆದಿದ್ದು, ಸಂತ್ರಸ್ತೆ ನೆರವಿಗಾಗಿ ಚೀರಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.ಸಂತ್ರಸ್ತ ಮಹಿಳೆ ಹೋಂಸ್ಟೇನಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದು, ಓರ್ವ ಮಹಿಳೆಯೂ ಸೇರಿ ಐವರಿದ್ದ ಸಿಬ್ಬಂದಿಯ ಗುಂಪೊಂದು ಆಕೆಯ ಖಾಸಗಿ ವಿಡಿಯೋವೊಂದನ್ನು ಚಿತ್ರಿಸಿ ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡಿದ್ದಾರೆ. ನಂತರ ಆಕೆಯ ಮೇಲೆ ಗಾಜಿನ ಬಾಟಲ್‌ನಿಂದ ತಲೆಗೆ ಬಡಿದು ಕೋಣೆಯೊಂದಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆಗೈದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಬಾಡಿಗೆಗೆ ಪಡೆಯಲಾಗಿದ್ದ ಹೋಂಸ್ಟೇಗೆ ಬೀಗ ಜಡಿದಿದ್ದಾರೆ.