ಸಾರಾಂಶ
ಯುವಕನ ಶೂಟೌಟ್ ಪ್ರಕರಣಕ್ಕೆ ಆತ ಜ.28ರಂದು ಪ್ರೇಯಸಿಯ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿ ‘ಬ್ಲಾಕ್ ಡೇ’ ಎಂದು ಹಾಕಿದ್ದಕ್ಕೆ ಯುವಕನನ್ನು ಆಕೆಯ ತಂದೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಿಜಯಪುರ : ಯುವಕನ ಶೂಟೌಟ್ ಪ್ರಕರಣಕ್ಕೆ ಆತ ಜ.28ರಂದು ಪ್ರೇಯಸಿಯ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿ ‘ಬ್ಲಾಕ್ ಡೇ’ ಎಂದು ಹಾಕಿದ್ದಕ್ಕೆ ಯುವಕನನ್ನು ಆಕೆಯ ತಂದೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಿಜಯಪುರ ತಿಕೋಟಾ ತಾಲೂಕಿನ ಮಾನಾವರದೊಡ್ಡಿ ಬಳಿ ಮಂಗಳವಾರ ನಡೆದಿದ್ದ ಮಾರಾಮಾರಿಯಲ್ಲಿ ಮೃತಪಟ್ಟ ಸತೀಶ ರಾಠೋಡ, ಆರೋಪಿ ರಮೇಶ ಲಮಾಣಿಯ ಪುತ್ರಿಯನ್ನು ಇಷ್ಟಪಟ್ಟಿದ್ದ. ಆದರೆ, ಮನೆಯಲ್ಲಿ ಒಪ್ಪದ ಕಾರಣ ರಮೇಶ್ ಅವರ ಪುತ್ರಿ ಜ.28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ದಿನವನ್ನು ತನ್ನ ಬ್ಲಾಕ್ ಡೇ ಎಂದು ಸತೀಶ್ ಆ ಯುವತಿಯ ಫೋಟೋವನ್ನು ತನ್ನ ಸ್ಟೇಟಸ್‌ನಲ್ಲಿ ಹಾಕಿದ್ದ ಎಂದು ತಿಳಿದು ಬಂದಿದೆ.
ಈ ವಿಚಾರ ತಿಳಿದು ರಮೇಶ್ ತನ್ನ ಪುತ್ರಿಯನ್ನು ಕಳೆದುಕೊಂಡಿದ್ದ ಆವೇಶದಲ್ಲಿ ಸತೀಶ್‌ನ ಮೇಲೆ ಪಿಸ್ತೂಲ್ ಮೂಲಕ ಫೈರಿಂಗ್ ಮಾಡಿದ್ದಾನೆ. ಗುಂಡು ತಗುಲಿದ ಸತೀಶನಿಗೆ ಗಂಭೀರ ಗಾಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇಬ್ಬರ ನಡುವೆಯೂ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ. ಆಗ ಘಟನೆಯಲ್ಲಿ ಸತೀಶ ಅಸುನೀಗಿದ್ದಾನೆ. ಇತ್ತ ರಮೇಶ ಲಮಾಣಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಕಿವಿ ಕೂಡ ರಮೇಶನದ್ದೇ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇಬ್ಬರ ನಡುವೆ ಬಲವಾದ ಹೊಡೆದಾಟ ಆಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಆರೋಪಿ ರಮೇಶ ಲಮಾಣಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.