ಸಾರಾಂಶ
ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿ.ಜಿ) ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗೋವರ್ಧನ್(24) ಬಂಧಿತ. ಆರೋಪಿಯಿಂದ 20.2 ಲಕ್ಷ ರು. ಮೌಲ್ಯದ 20 ಲ್ಯಾಪ್‌ಟಾಪ್, ಮೊಬೈಲ್ ಜಪ್ತಿ ಮಾಡಲಾಗಿದೆ.
ಬೆಂಗಳೂರು : ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿ.ಜಿ) ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗೋವರ್ಧನ್(24) ಬಂಧಿತ. ಆರೋಪಿಯಿಂದ 20.2 ಲಕ್ಷ ರು. ಮೌಲ್ಯದ 20 ಲ್ಯಾಪ್‌ಟಾಪ್, ಮೊಬೈಲ್ ಜಪ್ತಿ ಮಾಡಲಾಗಿದೆ.
ಆರೋಪಿಯು ನ.11 ರಂದು ಬಿಟಿಎಂ 2ನೇ ಹಂತದ ಪಿ.ಜಿ. ಯೊಂದರಲ್ಲಿ ಲ್ಯಾಪ್‌ಟಾಪ್ ಮತ್ತು 5 ಸಾವಿರ ರು. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪದವೀಧರನಾಗಿರುವ ಆರೋಪಿ
ಪದವೀಧರನಾಗಿರುವ ಆರೋಪಿಯು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಜೆ.ಪಿ ನಗರದ ಪಿ.ಜಿ.ಯೊಂದರಲ್ಲಿ ವಾಸವಿದ್ದ. ಖರ್ಚಿಗೆ ಹಣವಿಲ್ಲದ ಹಿನ್ನೆಲೆಯಲ್ಲಿ ತನ್ನ ನಿವಾಸದ ಸಮೀಪದಲ್ಲಿದ್ದ ಪಿ.ಜಿ.ಯೊಂದರಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಅದನ್ನು ಮಾರಾಟ ಮಾಡಿ ಹಣ ಪಡೆದುಕೊಂಡಿದ್ದ. ನಂತರದ ದಿನಗಳಲ್ಲಿ ಕಳ್ಳತನ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಆರೋಪಿಯು ಪಿ.ಜಿ.ಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಆರೋಪಿಯ ಬಂಧನದಿಂದ ಮೈಕೋಲೇಔಟ್, ತಿಲಕನಗರ, ಎಸ್.ಜಿ ಲೇಔಟ್, ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಡೆದಿದ್ದ 5 ಲ್ಯಾಪ್‌ಟಾಪ್ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಸೆರೆ:
ಆರೋಪಿಯು ನ.11 ರಂದು ಬಿಟಿಎಂ 2 ನೇ ಹಂತದ ಪಿ.ಜಿ.ಯೊಂದರಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಹೋಗುತ್ತಿದ್ದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯ ಆಧರಿಸಿ ಆರೋಪಿಯನ್ನು ಎನ್.ಎಸ್. ಪಾಳ್ಯದ ಹೋಟೆಲ್‌ವೊಂದರ ಬಳಿ ಬಂಧಿಸಲಾಯಿತು.
ಕಳ್ಳತನ ಮಾಡಿದ್ದ ಲ್ಯಾಪ್‌ಟಾಪ್‌ಗಳ ಪೈಕಿ ಕೆಲವನ್ನು ಮಾರಾಟ ಮಾಡಿದ್ದ ಮತ್ತೆ ಕೆಲವು ಲ್ಯಾಪ್‌ಟಾಪ್ ಅನ್ನು ಸ್ನೇಹಿತನಿಗೆ ನೀಡಿದ್ದ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))