ಸಾರಾಂಶ
ಎಸ್‌ಸಿ, ಎಸ್‌ಟಿ ಗುತ್ತೆದಾರರ ಸಂಘದಿಂದ ಪ್ರತಿಭಟನೆ । ಬಸ್ ನಿಲ್ದಾಣ ಎದುರು ರಸ್ತೆ ತಡೆಕನ್ನಡಪ್ರಭ ವಾರ್ತೆ ಸುರಪುರ
ಕೆಬಿಜೆನ್ನೆಲ್ ಎಂ.ಡಿ. ಶಿವುಕುಮಾರ ಪ್ರಕರಣವನ್ನು ಲೋಕಾಯುಕ್ತರಿಗೆ ಒಪ್ಪಿಸಿಬೇಕು ಎಂದು ಒತ್ತಾಯಿಸಿ ಕರ್ನಾಟಕ ಎಸ್.ಸಿ, ಎಸ್.ಟಿ. ಗುತ್ತೆದಾರರ ಸಂಘದ ಸದಸ್ಯರು ನಗರದ ಬಸ್ ನಿಲ್ದಾಣದ ಎದುರು ಭಾನುವಾರ ರಸ್ತೆ ತಡೆದು ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಎಸ್‌ಸಿ, ಎಸ್‌ಟಿ ಗುತ್ತೆದಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕೋಬ ದೊರೆ, ಕೃಷ್ಣ ಜಲ ಭಾಗ್ಯ ನಿಗಮ ಲಿಮಿಟೆಡ್ ನಿರ್ದೇಶಕ ಶಿವುಕುಮಾರ ಅಕ್ರಮ ಆಸ್ತಿ ಸಂಪಾದಿಸಿದ್ದು, ಗುತ್ತಿಗೆದಾರ ಅನ್ಯಾಯ ಮಾಡಲಾಗಿದೆ. ಹೆಚ್ಚುವರಿ ಕ್ರಿಯಾಯೋಜನೆಯಲ್ಲಿ ಕಾಮಗಾರಿ ನೀಡಲು ಪರ್ಸೆಂಟೇಜ್ ಪಡೆದು ಸರಕಾರದ ಬೊಕ್ಕಸಕ್ಕೆ ಮೋಸ ಮಾಡಿದ್ದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕೆಬಿಜೆಎನ್‌ಎಲ್ ಎಂ.ಡಿ. ಶಿವುಕುಮಾರ ಅಮಾನತು ಮಾಡಿದ್ದು ಸ್ವಾಗತಾರ್ಹ. ಈ ಅಮಾನತು ಕೆಬಿಜೆಎನ್‌ಎಲ್ ಇಲಾಖೆಗೆ ನಾಚಿಗೇಡಿನ ವಿಚಾರವಾಗಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಪರ್ಸೆಂಟೇಜ್ ತೆಗೆದುಕೊಂಡಿರುವುದಕ್ಕೆ ಇದೆ ಸಾಕ್ಷಿಯಾಗಿದೆ. ಹಲವಾರು ಹೋರಾಟದ ಮೂಲಕ ಕೆಬಿಜೆಎನ್‌ಎಲ್ ಎಂ.ಡಿ. ವಿರುದ್ಧ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಪ್ರಕರಣವನ್ನು ಲೋಕಾಯುಕ್ತರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.ಶಿವುಕುಮಾರ ಅವರ ಅವದಿಗೂ ಸೇವಿಂಗ್ ಗ್ರಾಂಟಿನ ಮತ್ತು ಹೆಚ್ಚುವರಿ ಕಾಮಗಾರಿಗಳ ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಲು ಆದೇಶ ನೀಡಬೇಕು. ಕೆಬಿಜೆಎನ್‌ಎಲ್ ನಾರಾಯಣಪುರ, ಭೀಮರಾಯನಗುಡಿಯ ವಿವಿಧ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಈ ಕಾರ್ಯ ವಿಳಂಬವಾದರೆ ನ.6 ರಂದು ಕರ್ನಾಟಕ ಬಂದ್ ಮಾಡಿ ರಸ್ತಾ ರೋಖೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮೌನೇಶ, ತಾಲೂಕಾಧ್ಯಕ್ಷ ಹಣಮಂತ್ರಾಯ, ಕೇಶವನಾಯಕ, ದವಲಸಾಬ್, ರಮೇಶಗೌಡ, ವೆಂಕಟೇಶ ಬಿಚ್ಚುಗತ್ತಿ, ಹಣಮಂತ್ರಾಯ ಬಿಚ್ಚುಗತ್ತಿಕೆರೆ ಇತರರಿದ್ದರು.- - - -
5ವೈಡಿಆರ್5:ಕೆಬಿಜೆನ್ನೆಲ್ ಎಂ.ಡಿ. ಶಿವುಕುಮಾರ ಪ್ರಕರಣವನ್ನು ಲೋಕಾಯುಕ್ತರಿಗೆ ಒಪ್ಪಿಸಿಬೇಕು ಎಂದು ಒತ್ತಾಯಿಸಿ ಕರ್ನಾಟಕ ಎಸ್‌ಸಿ, ಎಸ್‌ಟಿ ಗುತ್ತೆದಾರರ ಸಂಘದ ಸದಸ್ಯರು ಸುರಪುರ ನಗರದ ಬಸ್ ನಿಲ್ದಾಣದ ಎದುರು ಭಾನುವಾರ ರಸ್ತೆ ತಡೆದು ಪ್ರತಿಭಟಿಸಿದರು.
- - - -