ಪ್ರೀತಿಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಅಪ್ರಾಪ್ತೆ ಮೊಮ್ಮಗಳು ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ದಿ.ನಾಗೇಗೌಡರ ಪತಿ ಮಹದೇವಮ್ಮ(50) ತನ್ನ ಮೊಮ್ಮಗಳಿಂದಲೇ ಹತ್ಯೆಯಾದ ದುರ್ದೈವಿ. ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ, ಆಕೆಯ ಪ್ರಿಯಕರ ಆಕಾಶ್ ಕೊಲೆ ಆರೋಪಿಗಳು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರೀತಿಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಅಪ್ರಾಪ್ತೆ ಮೊಮ್ಮಗಳು ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ದಿ.ನಾಗೇಗೌಡರ ಪತಿ ಮಹದೇವಮ್ಮ(50) ತನ್ನ ಮೊಮ್ಮಗಳಿಂದಲೇ ಹತ್ಯೆಯಾದ ದುರ್ದೈವಿ. ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ (16), ಆಕೆಯ ಪ್ರಿಯಕರ ಆಕಾಶ್ (28) ಕೊಲೆ ಆರೋಪಿಗಳು.

ಗ್ರಾಮದ ಬಾಲಕಿ ಮತ್ತು ತಾಲೂಕಿನ ಬೆಳತೂರು ಗ್ರಾಮದ ಆಕಾಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಅಜ್ಜಿ ಮಹದೇವಮ್ಮ ಅವರ ವಿರೋಧವಿತ್ತು. ಈ ಹಿಂದೆ ಆಕಾಶ್ ಮತ್ತು ಮಹದೇವಮ್ಮ ಅವರ ನಡುವೆ ಗಲಾಟೆಯಾಗಿತ್ತು ಎಂದು ತಿಳಿದು ಬಂದಿದೆ.

ಅಜ್ಜಿ ಮಹದೇವಮ್ಮ ಆಕಾಶನ ಜೊತೆಗಿನ ಸಂಬಂಧ ಬಿಡಿಸಲು ಮೊಮ್ಮಳಿಗೆ ಬೇರೊಂದು ಕಡೆ ಸಂಬಂಧ ಹುಡುಕುವ ಸಿದ್ಧತೆಯಲ್ಲಿದ್ದರು ಎಂದು ಹೇಳಲಾಗಿದೆ. ಇದರಿಂದ ಅಸಮಾಧಾನಗೊಂಡು ಬಾಲಕಿ ಪ್ರಿಯಕರನ ಜೊತೆ ಸೇರಿ ಅಜ್ಜಿ ಮಹದೇವಮ್ಮ ಅವರನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ.

ಶನಿವಾರ ಮಹಾಲಯ ಅಮಾವಾಸ್ಯೆ ದಿನ ಮೊಮ್ಮಗಳು ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ತನ್ನ ತಾಯಿ ತವರು ಮನೆಗೆ ಹಬ್ಬಕ್ಕೆ ಹೋಗಿದ್ದಾರೆ. ಅದೇ ದಿನ ರಾತ್ರಿ ಬೂಕನಕೆರೆಯ ಅಜ್ಜಿ ಮನೆಗೆ ಹಿಂತಿರುಗಿದ್ದಾಳೆ. ರಾತ್ರಿ ಫೋನ್ ಮಾಡಿ ತನ್ನ ಪ್ರಿಯಕರ ಆಕಾಶನನ್ನು ಮನೆಗೆ ಕರೆಯಿಸಿಕೊಂಡು ಆತನ ಜೊತೆ ಸೇರಿ ಅಜ್ಜಿಯನ್ನು ಹೊಡೆದು ಸಾಯಿಸಿದ್ದಾರೆ.

ಅಜ್ಜಿ ಕೊಲೆ ಮಾಡಿದ ನಂತರ ಪ್ರಿಯಕರ ಆಕಾಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಮ್ಮಗಳು ಏನೂ ಗೊತ್ತಿಲ್ಲದಂತೆ ಮನೆಯಲ್ಲಿದ್ದಾಳೆ. ಭಾನುವಾರ ಬೆಳಗ್ಗೆ ಮತ್ತೊಬ್ಬ ಅಜ್ಜಿ ಮನೆಗೆ ಬಂದು ಮಹದೇವಮ್ಮರನ್ನು ನೋಡಿದಾಗ ಮಲಗಿದ್ದ ಸ್ಥಿತಿಯಲ್ಲಿಯೇ ಸತ್ತಿರುವುದು ಬೆಳಕಿಗೆ ಬಂದಿದೆ.

ಮಹದೇವಮ್ಮ ಕೊಲೆ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಆಕಾಶ್ ಪತ್ತೆಗೆ ಬಲೆ ಬೀಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ವಿಮ್ಸ್ ಆಸ್ಪತ್ರಗೆ ಕಳುಹಿಸಲಾಗಿದೆ.ಕೇರಳದಲ್ಲಿ ಮಂಡ್ಯ ವಿವಿ ವಿದ್ಯಾರ್ಥಿಗಳಿಬ್ಬರು ಸಾವು

ಕನ್ನಡಪ್ರಭ ವಾರ್ತೆ ಮಂಡ್ಯಕೇರಳದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ವಯನಾಡ್‌ನ ಸುಲ್ತಾನ್ ಬತ್ತೇರಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಮಂಡ್ಯ ವಿಶ್ವವಿದ್ಯಾನಿಲಯದ ಭರತ್ ಮತ್ತು ರಂಜಿತ್ ಮೃತಪಟ್ಟವರು. ೧೫ ಮಂದಿ ಕೇರಳದ ವಿವಿಧೆಡೆಗೆ ಪ್ರವಾಸ ತೆರಳಿ ವಾಪಸಾಗುತ್ತಿದ್ದರು. ವಾಹನವು ಸುಲ್ತಾನ್ ಬತ್ತೇರಿಯ ೫೪ನೇ ಮೈಲಿಯಲ್ಲಿ ತಡರಾತ್ರಿ ೧.೩೦ರ ವೇಳೆಗೆ ಉರುಳಿಬಿದ್ದಿದೆ. ಸ್ಥಳೀಯರು ಕೂಡಲೇ ವಾಹನದಲ್ಲಿದ್ದವರ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ವಾಹನವು ನಜ್ಜುಗಜ್ಜಾಗಿದ್ದು ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ವಾಹನದ ಭಾಗಗಳನ್ನು ತುಂಡರಿಸಿ ಒಳಗೆ ಸಿಲುಕಿದ್ದವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ರಕ್ಷಣೆ ಮಾಡಲಾದವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.