ಚಿನ್ನದ ವ್ಯಾಪಾರಿಗೆ ಚಿನ್ನವನ್ನು ವಾಪಸ್ ನೀಡದೆ ವಂಚಿಸಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಬಂಧಿಸಿರುವ ಕಗ್ಗಲೀಪುರ ಠಾಣೆ ಪೊಲೀಸರು 15 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ: ಚಿನ್ನದ ವ್ಯಾಪಾರಿಗೆ ಚಿನ್ನವನ್ನು ವಾಪಸ್ ನೀಡದೆ ವಂಚಿಸಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಬಂಧಿಸಿರುವ ಕಗ್ಗಲೀಪುರ ಠಾಣೆ ಪೊಲೀಸರು 15 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಪುರ್ಬಪರ್ಧಾನ್ ಜಿಲ್ಲೆಯ ಮನ್ಮನೊಹರ್ಪುರ್ ವಾಸಿ ಮುಕ್ತ ಶೇಕ್ ಬಂಧಿತ ಆರೋಪಿ.

ಮುಕ್ತ ಶೇಕ್ ಮತ್ತು ಸುಂಟಶೇಕ್ ರವರು ಚಿನ್ನದ ಒಡವೆ ಡಿಸೈನ್ ಮಾಡಿಕೊಡುವುದಾಗಿ ಚಿನ್ನದ ವ್ಯಾಪಾರಿ ಸಂತೋಷ ಅವರನ್ನು ನಂಬಿಸಿ 550 ಗ್ರಾಂ ಚಿನ್ನದ ಗಟ್ಟಿ ಪಡೆದುಕೊಂಡು ಹಾಗೂ 30 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿದ್ದರು.ಈ ಬಗ್ಗೆ ಸಂತೋಷ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಕಗ್ಗಲೀಪುರ ಠಾಣೆ ಪೊಲೀಸರು ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾ ಸಮೀಪ ಆರೋಪಿ ಮುಕ್ತ ಶೇಕ್ ನನ್ನು ಬಂಧಿಸಿ 100 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ಆರೋಪಿ ಮುಕ್ತ ಶೇಕ್ ತನ್ನ ಸಹಚರರಾದ ಹಸಿಬುಲ್ ಶೇಕ್ ಮತ್ತು ಸಂಟುಶೇಕ್ ರವರು ಚಿನ್ನದ ವ್ಯಾಪಾರಸ್ಥರಿಂದ ವಡವೆಗಳನ್ನು ಡಿಸೈನ್ ಮಾಡಿಕೊಡುತ್ತೇವೆಂದು ಚಿನ್ನವನ್ನು ಪಡೆದು ವಾಪಸ್ಸು ನೀಡದೆ ಮೋಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ರಾಜೇಂದ್ರರವರ ಮಾರ್ಗದರ್ಶನದಲ್ಲಿ ಡಿವೈಸ್ಪಿ ಬಿ.ಎನ್.ಶ್ರೀನಿವಾಸ್ ಮತ್ತು ಇನ್ಸ್ ಪೆಕ್ಟರ್ ವೆಂಕಟೇಶ್ ರವರ ನೇತೃತ್ವದಲ್ಲಿ ಪಿಎಸ್ಸೈ ನರಸಿಂಹಮೂರ್ತಿ, ಎಎಸ್ಸೈ ಮುನಿರಾಜು, ಕೆ.ಟಿ.ಶ್ರೀನಿವಾಸ್ , ರಾಹುಲ್ , ಮಹದೇವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.