ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತುಂಬಿ ಹರಿಯತ್ತಿರುವ ಕಾವೇರಿ ನದಿಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ವೆಲ್ಲೆಸ್ಲೀ ಸೇತುವೆ ಬಳಿ ನಡೆದಿದೆ.ಮೈಸೂರಿನ ಜನತಾನಗರ ನಿವಾಸಿ ಲೇಟ್ ಯಾಲಕ್ಕಯ್ಯ ಪುತ್ರ ಕ್ಯಾಬ್ ಡ್ರೈವರ್ ವೈ.ರೇವಣ್ಣ(53) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಮಾನಸಿನ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ವೆಲ್ಲೆಸ್ಲೀ ಸೇತುವೆ ಮೇಲಿಂದ ಹಾರುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಗಿಕೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿದು ಅಗ್ನಿ ಶಾಮಕದಳದ ಸಿಬ್ಬಂದಿಯೊಂದಿಗೆ ಸೇತುವೆ ಕೆಳಭಾಗದಲ್ಲಿ ತೇಲಿ ಹೋಗುತ್ತಿದ್ದ ಶವವನ್ನು ಗಂಜಾಂ ಶ್ರೀ ನಿಮಿಷಾಂಬ ದೇವಾಲಯದ ಬಳಿ ಹಿಡಿದು ನದಿಯಿಂದ ಹೊರ ತಂದಿದ್ದಾರೆ.ಸುಮಾರು ಒಂದು ಕಿಮೀ ವರೆಗೆ ನದಿಯಲ್ಲಿ ತೇಲಿ ಬಂದ ಶವವನ್ನು ತುಂಬಿ ಹರಿಯುತ್ತಿದ್ದ ನದಿಯಿಂದ ಹೊರತಂದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಈ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ಧಾರೆ.
ಅಪರಿಚಿತ ಗಂಡಸಿನ ಶವ ಪತ್ತೆಶ್ರೀರಂಗಪಟ್ಟಣ: ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿರುವ ಪಶ್ಚಿಮವಾಹಿನಿ ಕಾವೇರಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಶ್ರೀರಂಗಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟ ವ್ಯಕ್ತಿಯು ಸುಮಾರು 45 ರಿಂದ 50 ವರ್ಷದ ವಯಸ್ಸಿನವರಾಗಿದ್ದು, 5.6 ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಅಂಡರ್ ವೇರ್, ನೀಲಿ ಬಣ್ಣದ ಟ್ರಾಕ್ ಪ್ಯಾಟ್, ಬಲಗೈನಲ್ಲಿ ಕೆಂಪು ಮಣಿಗಳಿಂದ ಕೂಡಿರುವ ದಾರ ಹಾಗೂ ಬಲಗಾಲಿನಲ್ಲಿ ಕಪ್ಪು ಬಿಳಿ ದಾರವಿರುತ್ತದೆ.6 ತಿಂಗಳ ಮಗುವಿನೊಂದಿಗೆ ಮಹಿಳೆ ನಾಪತ್ತೆಮಂಡ್ಯ: ನಗರ ನಿವಾಸಿಗಳಾದ ಶಾಜಿಯಾ ಮೆಹದಿ (24) ಎಂಬ ಮಹಿಳೆ 6 ತಿಂಗಳ ಮಗುವಿನೊಂದಿಗೆ ಕಾಣೆಯಾಗಿದ್ದಾರೆ ಎಂದು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾಗಿರುವ ಮಹಿಳೆ 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಹೊಂದಿದ್ದು, ಮನೆಯಿಂದ ಹೊರಡುವಾಗ ಹಸಿರು ಬಣ್ಣದ ಚೂಡಿದಾರ್, ಅದರ ಮೇಲೆ ಕಪ್ಪು ಬಣ್ಣದ ಬುರ್ಖ ಧರಿಸಿರುತ್ತಾರೆ. ಮಗುವು ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತೆ. ಕಾಣೆಯಾದವರ ಸುಳಿವು ಸಿಕ್ಕಲ್ಲಿ ಮಂಡ್ಯ ಪೂರ್ವ ಪೊಲೀಸ್ ಠಾಣೆ ಸಂಪರ್ಕಿಸಲು ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.ಎಚ್.ಟಿ.ಉಮೇಶ್ ನಾಪತ್ತೆ
ಮದ್ದೂರು:ತಾಲೂಕಿನ ಹಳ್ಳಿಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಚ್.ಟಿ.ಉಮೇಶ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ.
ಕಳೆದ ಆ.6ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮನೆಯಿಂದ ಹೊರಹೋದ ಉಮೇಶ ಕಣ್ಮರೆಯಾಗಿದ್ದಾನೆ ಎಂದು ಈತನ ತಂದೆ ತಗಡಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಉಮೇಶ ಕನ್ನಡ ಭಾಷೆ ಬಲ್ಲವನಾಗಿದ್ದು, 5.5 ಅಡಿ ಎತ್ತರ, ದೃಢ ಕಾಯ ಶರೀರ, ತೆಳ್ಳನೆ ಕೂದಲು ಹೊಂದಿದ್ದಾನೆ. ಉಮೇಶ ಮನೆಯಿಂದ ಹೊರಡುವಾಗ ಅರ್ಧ ಬಿಳಿ ಬಣ್ಣದ ಕಪ್ಪು ಶರ್ಟು, ಕಪ್ಪು ಜೀನ್ಸ್ ಪ್ಯಾಂಟ್ ತರಿಸಿದ್ದು, ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.