ಸಾರಾಂಶ
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗಾಗೇನಹಳ್ಳಿ ಮಹೇಶ ವೀರಜಪ್ಪ (35) ಮೃತ ವ್ಯಕ್ತಿ. ಈತ ಮೈಸೂರು ವಿಕ್ರಾಂತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮಹದೇವಪುರ ಬಳಿಯ ತರಿಪುರ ಗ್ರಾಮದ ಸ್ನೇಹಿತನ ಮನೆ ಗೃಹಪ್ರವೇಶಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಹದೇವಪುರದ ಕಾವೇರಿ ಬೋರೇದೇವರ ದೇವಾಲಯದ ಬಳಿ ನಡೆದಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗಾಗೇನಹಳ್ಳಿ ಮಹೇಶ ವೀರಜಪ್ಪ (35) ಮೃತ ವ್ಯಕ್ತಿ. ಈತ ಮೈಸೂರು ವಿಕ್ರಾಂತ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮಹದೇವಪುರ ಬಳಿಯ ತರಿಪುರ ಗ್ರಾಮದ ಸ್ನೇಹಿತನ ಮನೆ ಗೃಹಪ್ರವೇಶಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗ್ರಾಮದ ಬಳಿಯ ರಾಜ ಪರಮೇಶ್ವರಿ ನಾಲೆ ಅಣೆಕಟ್ಟೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಪೊಲೀಸರು ಹಾಗೂ ಸ್ಥಳಿಯರು ಮೃತನ ಶವಕ್ಕಾಗಿ ಶೋಧಕಾರ್ಯ ನಡೆಸಿ ನಂತರ ಮೃತದೇಹವನ್ನು ನೀರಿನಿಂದ ಹೊರ ತೆಗೆದು ಪೋಷಕರಿಗೆ ನೀಡಿದ್ದಾರೆ.ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಅಪರಾಧಿಗೆ ೨೦ ವರ್ಷ ಕಠಿಣ ಸಜೆ, ೬ ಲಕ್ಷ ರು. ಪರಿಹಾರಕ್ಕೆ ಆದೇಶಮಂಡ್ಯ: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಎಫ್‌ಟಿಎಸ್‌ಸಿ-೧ (ಫೋಕ್ಸೋ ವಿಶೇಷ) ನ್ಯಾಯಾಲಯ ೨೦ ವರ್ಷ ಕಠಿಣ ಶಿಕ್ಷೆ, ೧೦ ಸಾವಿರ ರು. ದಂಡ ಹಾಗೂ ನೊಂದ ಬಾಲಕಿಗೆ ೬ ಲಕ್ಷ ರು. ಪರಿಹಾರ ನೀಡುವಂತೆ ಆದೇಶಿಸಿದೆ.
ಮದ್ದೂರು ತಾಲೂಕು ಶಿವಪುರದ ಟಿ.ಬಿ.ರಾಜು (೬೩) ಶಿಕ್ಷೆಗೊಳಗಾದ ಅಪರಾಧಿ. ಈತ ೮ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಪೋಷಕರು ನೀಡಿದ ದೂರನ್ನಾಧರಿಸಿ ಮದ್ದೂರು ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ತನಿಖೆ ನಡೆಸಿದ್ದು, ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಶಿವಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಟಿ.ಬಿ.ರಾಜುಗೆ ನ್ಯಾಯಾಲಯ ೨೦ ವರ್ಷ ಕಠಿಣ ಸಜೆ, ೧೦ ಸಾವಿರ ರು. ದಂಡ ಹಾಗೂ ನೊಂದ ಬಾಲಕಿಗೆ ೬ ಲಕ್ಷ ರು. ಪರಿಹಾರ ನೀಡುವಂತೆ ಆದೇಶಿಸಿದೆ.
ಸರ್ಕಾರಿ ಅಭಿಯೋಜಕರಾಗಿ ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು.