ಲೈಂಗಿಕ ಸಂಪರ್ಕಕ್ಕೆ ಸಹಕರಿಸದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಮಹಿಳೆ ಕೊಂದವನಿಗೆ ಜೀವಾವಧಿ ಶಿಕ್ಷೆ

| N/A | Published : Feb 28 2025, 02:01 AM IST / Updated: Feb 28 2025, 04:16 AM IST

ಸಾರಾಂಶ

ಲೈಂಗಿಕ ಸಂಪರ್ಕಕ್ಕೆ ಸಹಕರಿಸದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಮಹಿಳೆಯನ್ನ ಸಾಯಿಸುವುದಲ್ಲದೆ, ಆಕೆಯ 4 ವರ್ಷದ ಮಗುವನನ್ನ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರು. ದಂಡ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

 ಬೆಂಗಳೂರು : ಲೈಂಗಿಕ ಸಂಪರ್ಕಕ್ಕೆ ಸಹಕರಿಸದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಮಹಿಳೆಯನ್ನ ಸಾಯಿಸುವುದಲ್ಲದೆ, ಆಕೆಯ 4 ವರ್ಷದ ಮಗುವನನ್ನ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರು. ದಂಡ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಹೊಸಪೇಟೆ ಮೂಲದ ಪ್ರಶಾಂತ್ ದೋಷಿಯಾಗಿ ಪರಿಗಣಿಸಿದ ನಗರ 51ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಸಿ.ಬಿ. ಸಂತೋಷ್‌ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದ್ದಾರೆ. ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರಾಗಿ ಬಿ.ಎಚ್.ಭಾಸ್ಕರ್ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ:

ಬೇಗೂರು ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್‌ನಲ್ಲಿ ಪತಿ ಹಾಗೂ ನಾಲ್ಕು ವರ್ಷದ ಹೆಣ್ಣು ಮಗುವಿಗೆನೊಂದಿಗೆ ನೆಲೆಸಿದ್ದ ಯಮುನಾ,   ಔಷಧ ಮಾರಾಟ ಮಾಡುತ್ತಿದ್ದರು. ಔಷಧ ಖರೀದಿ ವಿಚಾರವಾಗಿ ಆನ್ ಲೈನ್ ಮೂಲಕ ಅಪರಾಧಿ ಪ್ರಶಾಂತ್, ಮೃತ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ನಂತರ ಮೊಬೈಲ್ ನಂಬರ್ ಪಡೆದ ವಾಟ್ಸಾಪ್ ಕರೆ ಮಾಡಿ ಮಾತನಾಡುತ್ತಿದ್ದ. 2021ರ ಅ.10ರಂದು ಔಷಧ ಖರೀದಿಸುವ ಸಲುವಾಗಿ ಹೊಸಪೇಟೆಯಿಂದ ರೈಲಿನ ಮೂಲಕ ನಗರಕ್ಕೆ ಬಂದಿದ್ದ ಪ್ರಶಾಂತ್, ಬೇಗೂರಿನ ಮನೆಯ ವಿಳಾಸ ಪಡೆದು ಗಂಡ ಕೆಲಸಕ್ಕೆ ಹೋದಾಗ ಮಹಿಳೆ  ಮನೆಗೆ ಪ್ರಶಾಂತ್ ಬಂದಿದ್ದ. ಔಷಧ ಖರೀದಿ ನೆಪದಲ್ಲಿ ಆಕೆಯೊಂದಿಗೆ ಮಾತನಾಡಿ, ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಮಹಿಳೆಯು ನಿರಾಕರಿಸಿದ್ದಳು. ಆಗ ಆಕೆಯನ್ನು ಕೊಲೆ ಮಾಡಿದ್ದ.

ಮೃತ ಮಹಿಳೆ ಪತಿ ನೀಡಿದ ದೂರು ಆಧರಿಸಿ ಅಂದಿನ ಬೇಗೂರು ಠಾಣೆ ಇನ್ ಸ್ಪೆಕ್ಟರ್ ಆಗಿದ್ದ ಶಿವಕುಮಾರ್ ಬಿ ಮುಚ್ಚಂಡಿ ಅವರು ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

4 ವರ್ಷದ ಮಗುವಿನ ಕತ್ತು ಸಿಳಿದ್ದ ಕಿರಾತಕ:

ಆಕ್ರೋಶದಲ್ಲಿ ಪ್ರಶಾಂತ್‌ ಮನೆಯಲ್ಲಿದ್ದ ಚಾಕುವಿನಿಂದ ಯುಮುನಾಗೆ ಚುಚ್ಚಿ ಸಾಯಿಸಿದ್ದ. ಈ ಕೊಲೆಯನ್ನು ಕಂಡ 4 ವರ್ಷದ ಮಗು ಜೋರಾಗಿ ಕಿರುಚಿಕೊಂಡಿತ್ತು. ಅಳು ಜೋರಾಗಿದ್ದರಿಂದ ಮಗುವಿನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ರೈಲಿನ ಮುಖಾಂತರ ಹೊಸಪೇಟೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.